ಬಿಡುಗಡೆಯಾಗುವಾಗ ನೆಗೆಟಿವ್ ಟಾಕ್ ಎದುರಿಸಿದ್ದ ‘ಧುರಂಧರ್’ ಸಿನಿಮಾ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ನಿರ್ಮಿಸಿದೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಖನ್ನಾ ಅಭಿನಯದ ಈ ಸಿನಿಮಾ 935 ಕೋಟಿ ರೂಪಾಯಿ ಗಳಿಕೆ ಮಾಡಿ, ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಚಿತ್ರದ ದಾಖಲೆಯನ್ನು ಮುರಿದಿದೆ.
‘ಕಾಂತಾರ: ಚಾಪ್ಟರ್ 1’ 800 ಕೋಟಿ ರೂಪಾಯಿ ಗಳಿಕೆ ಮಾಡಿ ಈ ವರ್ಷದ ಅತಿ ದೊಡ್ಡ ಹಿಟ್ ಆಗಿತ್ತು. ಆದರೆ ಈಗ ‘ಧುರಂಧರ್’ ಆ ದಾಖಲೆಯನ್ನು ದಾಟಿ, ಜಾಗತಿಕವಾಗಿ 1000 ಕೋಟಿ ರೂಪಾಯಿ ಕ್ಲಬ್ ಸೇರುವ ಏಕೈಕ ಸಿನಿಮಾ ಆಗುವತ್ತ ವೇಗವಾಗಿ ಮುನ್ನುಗ್ಗುತ್ತಿದೆ.
ಚಿತ್ರದಲ್ಲಿ ರಣವೀರ್ ಸಿಂಗ್ ‘ಆದಿತ್ಯ ಧಾರ್’ ಪಾತ್ರದಲ್ಲಿ ಮಿಂಚಿದ್ದರೆ, ಖಡಕ್ ವಿಲನ್ ಆಗಿ ಅಕ್ಷಯ್ ಖನ್ನಾ ಅಬ್ಬರಿಸಿದ್ದಾರೆ. ಹಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ಮಂಕಾಗಿದ್ದ ಅಕ್ಷಯ್ ಖನ್ನಾ ಅವರಿಗೆ ಈ ಸಿನಿಮಾ ಮರುಜೀವ ನೀಡಿದೆ. ಕೆಲ ದೇಶಗಳಲ್ಲಿ ಬ್ಯಾನ್ ಆದರೂ ಕೂಡ, ‘ಧುರಂಧರ್’ ಚಿತ್ರದ ಗಳಿಕೆ ಮೇಲೆ ಯಾವುದೇ ಪರಿಣಾಮ ಬೀಳದೆ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡಿದೆ.
ಈ ವೀಕೆಂಡ್ ಮುಗಿಯುವ ಮೊದಲು ‘ಧುರಂಧರ್’ ಸಿನಿಮಾ 1000 ಕೋಟಿ ರೂಪಾಯಿ ದಾಟುವ ಸಾಧ್ಯತೆ ಪಕ್ಕಾ ಎನ್ನಲಾಗುತ್ತಿದ್ದು, 2025ರ ‘ಸಾವಿರ ಕೋಟಿ ಕ್ಲಬ್’ ಸೇರಿದ ಏಕೈಕ ಸಿನಿಮಾ ಎಂಬ ದಾಖಲೆ ಬರೆಯಲು ಸಜ್ಜಾಗಿದೆ.



