ಬೆಂಗಳೂರು: ವಾಣಿಜ್ಯ ಹಾಗೂ ಕೈಗಾರಿಕಾ ವಲಯಕ್ಕೆ ಕೆಇಆರ್‌ಸಿ ಶಾಕ್ ನೀಡಿದ್ದು, 2025-26ನೇ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿದ್ಯುತ್ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ಖಂಡಿಸಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ದರ ಏರಿಕೆ ಕುರಿತು ಫೆಬ್ರವರಿ 20ರಂದು ಸಾರ್ವಜನಿಕರೊಂದಿಗೆ ಚರ್ಚೆ ನಡೆದಿತ್ತು. ಆ ವೇಳೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದರ ಹೆಚ್ಚಳ ಮಾಡಲ್ಲವೆಂದು ಕೆಇಆರ್‌ಸಿ ಭರವಸೆ ನೀಡಿತ್ತು ಎನ್ನಲಾಗಿದೆ. ಆದರೆ ಇದೀಗ ಆಯೋಗ ಯು-ಟರ್ನ್ ತೆಗೆದುಕೊಂಡಿರುವುದು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.
ಯೂನಿಟ್‌ಗೆ ಪರಿಷ್ಕೃತ ದರಗಳು ಹೀಗಿವೆ:
-
LT-3(A) ವಾಣಿಜ್ಯ ಬಳಕೆ: ₹7ರಿಂದ ₹7.10ಕ್ಕೆ ಏರಿಕೆ
-
LT-5 ಕೈಗಾರಿಕಾ ಬಳಕೆ: ₹4.50ರಿಂದ ₹5.20ಕ್ಕೆ ಏರಿಕೆ
-
HT-2(A) ಮೆಟ್ರೋ, ರೈಲ್ವೆ ಮತ್ತು ಇತರೆ: ₹6.60ರಿಂದ ₹6.70ಕ್ಕೆ ಏರಿಕೆ
-
HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್ ಬಳಕೆ: ₹5.95ರಿಂದ ₹6.90ಕ್ಕೆ ಏರಿಕೆ
ದರ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಳವಾಗಲಿದೆ ಎಂದು ಕೈಗಾರಿಕಾ ವಲಯ ಎಚ್ಚರಿಸಿದೆ. ಸರ್ಕಾರ ಮತ್ತು ಆಯೋಗವು ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಉದ್ಯಮಿಗಳು ಆಗ್ರಹಿಸಿದ್ದಾರೆ.



