ಕಳೆದ ವರ್ಷ ಜನವರಿ ತಿಂಗಳಲ್ಲಿ ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದ ಕನ್ನಡಿಗ KL ರಾಹುಲ್ ಹಾಗೂ ಆಥಿಯಾ ಶೆಟ್ಟಿ ಅವರು ಕುಟುಂಬಕ್ಕೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಆಥಿಯಾ ಶೆಟ್ಟಿ ಗರ್ಭಿಣಿ ಆಗಿದ್ದು, ತಾವು ಮಗುವನ್ನು ನಿರೀಕ್ಷೆ ಮಾಡುತ್ತಿರುವುದಾಗಿ ಜೋಡಿ ಹೇಳಿದೆ. ‘ದೇವರ ಸುಂದರ ಆಶೀರ್ವಾದ 2025ಕ್ಕೆ ಬರಲಿದೆ’ ಎಂದು ಈ ಜೋಡಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ.
ಆಥಿಯಾ ಶೆಟ್ಟಿ ಮದುವೆಗೆ ಮುಂಚೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಅವರಿಗೆ ಹೆಚ್ಚೇನು ಅವಕಾಶಗಳು ಸಿಗುತ್ತಿರಲಿಲ್ಲ. 2019 ರಲ್ಲಿ ಅವರು ನಟಿಸಿದ ಕೊನೆಯ ಸಿನಿಮಾ ಬಿಡುಗಡೆ ಆಗಿತ್ತು. ಮದುವೆ ಆದ ಬಳಿಕವಂತೂ ಸಿನಿಮಾಗಳಿಂದಲೂ ಸಂಪೂರ್ಣ ದೂರವೇ ಉಳಿದಿದ್ದಾರೆ. ಇನ್ನು ಕೆಎಲ್ ರಾಹುಲ್ ಸಹ ತಮ್ಮ ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದಾರೆ.



