ಮೈಸೂರು: ಎಲ್ಲಾವನ್ನೂ ಮರೆತು ಯೋಗೇಶ್ವರ್ಗೆ ಟಿಕೆಟ್ ನೀಡಲು ಕುಮಾರಣ್ಣ ತಯಾರಾಗಿದ್ದರು ಎಂದು ಜೆಡಿಎಸ್ ಶಾಸಕ ಸಾರಾ ಮಹೇಶ್ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಸಿಪಿ ಯೋಗೇಶ್ವರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು ಅಂತ ಗೊತ್ತಿದ್ದರೂ,
ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಅವರಿಗೆ ಜೆಡಿಎಸ್ ಪಕ್ಷದ ಬಿ ಫಾರ್ಮ್ ಕೊಡಲು ವರಿಷ್ಠರು ರೆಡಿಯಿದ್ದರು, ಅವರು ಕಾಂಗ್ರೆಸ್ ಸೇರಿ ಗೆದ್ದಿದ್ದಾರೆ, ಮುಂದಿನ 3 ವರ್ಷ ಕಾಲ ಕ್ಷೇತ್ರದ ಅಭಿವೃದ್ಧಿ ಕಡೆ ಅವರು ಗಮನ ಹರಿಸಲಿ ಎಂದು ಹೇಳಿದರು.
ಇನ್ನೂ ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಜಿ.ಟಿ. ದೇವೇಗೌಡರನ್ನು ವರಿಷ್ಠ ದೇವೇಗೌಡರೇ ಫೋನ್ ಮಾಡಿ ಕರೆದಿದ್ದರು. ನಾವು ಚುನಾವಣೆಗೂ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ. ನಾನಾ ಕಾರಣದಿಂದ ಸೋಲಾಗಿದೆ ಎಂದು ಹೇಳಿದರು.



