HomeGadag Newsಇಂದು ಅಕ್ಕಮಹಾದೇವಿ ಜಯಂತಿ ಕುರಿತು ಉಪನ್ಯಾಸ

ಇಂದು ಅಕ್ಕಮಹಾದೇವಿ ಜಯಂತಿ ಕುರಿತು ಉಪನ್ಯಾಸ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಸವದಳ ಗದಗ-ಬೆಟಗೇರಿ, ಜಿಲ್ಲಾ, ತಾಲೂಕ, ಶರಣ ಸಹಿತ್ಯ ಪರಿಷತ್ತು ಗದಗ, ಜಿಲ್ಲಾ, ತಾಲೂಕ ಕದಳಿ ಮಹಿಳಾ ವೇದಿಕೆ ಗದಗ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭೆ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏ. 28ರ ಬೆಳಿಗ್ಗೆ 11ಕ್ಕೆ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆಯಲಿರುವ ಬಸವದಳದ 1591ನೇ ಶರಣ ಸಂಗಮದಲ್ಲಿ `ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ’ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ, ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಶಿರಹಟ್ಟಿಯ ಎಫ್.ಎಂ. ಡಬಾಲಿ ಪದವಿಪೂರ್ವ ಮಹಾವಿದ್ಯಾಲಯದ ಉಪನ್ಯಾಸಕಿ ಸುಧಾ ಎ.ಹುಚ್ಚಣ್ಣವರ ಉಪನ್ಯಾಸ ಮಾಡುವರು. ಅತಿಥಿಗಳಾಗಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಶರಣ ಕೆ.ಎಸ್. ಚೆಟ್ಟಿ ಆಗಮಿಸುವರು.

ಕಾರಣ ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!