ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನ. 2ರಂದು ಬೆಳಿಗ್ಗೆ 10ಕ್ಕೆ ನಡೆಯಲಿರುವ ಬಸವದಳದ 1670ನೇ ಶರಣ ಸಂಗಮದಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ, ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಕನ್ನಡ ಉಪನ್ಯಾಸಕ, ಶರಣ ಎಸ್.ಯು. ಸಜ್ಜನಶೆಟ್ಟರ ಉಪನ್ಯಾಸ ಮಾಡುವರು. ಅತಿಥಿಗಳಾಗಿ ಶರಣ ಎಂ.ಜಿ. ಖಂಡೆಮ್ಮನವರ ಆಗಮಿಸುವರು. ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.



