ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ಜೂನ್ 16ರ ಬೆಳಿಗ್ಗೆ 11ಕ್ಕೆ ನಡೆಯಲಿರುವ ಬಸವದಳದ 1598ನೇ ಶರಣ ಸಂಗಮದಲ್ಲಿ ಶರಣ ಕುರುಬ ಗೊಲ್ಲಾಳೇಶ್ವರ (ವೀರಗೊಲ್ಲಾಳ) ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಅಧ್ಯಕ್ಷತೆಯನ್ನು ಬಸವದಳದ ಅಧ್ಯಕ್ಷ ಶರಣ ವಿ.ಕೆ. ಕರೇಗೌಡ್ರ ವಹಿಸುವರು. ಅನುಭಾವಿಗಳಾದ ಶರಣ ಎನ್.ಎಚ್. ಹಿರೇಸಕ್ಕರಗೌಡ್ರ ಇವರು ಉಪನ್ಯಾಸ ಮಾಡುವರು. ಕಾರಣ, ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಸಂಘಟಿಕರ ಪರವಾಗಿ ಪ್ರಕಾಶ ಅಸುಂಡಿಯವರು ವಿನಂತಿಸಿದ್ದಾರೆ.



