Homecultureಧರ್ಮ ಜಾಗೃತಿಗಾಗಿ ಗಣೇಶೋತ್ಸವ ಆಚರಣೆಯಾಗಲಿ : ರಾಜು

ಧರ್ಮ ಜಾಗೃತಿಗಾಗಿ ಗಣೇಶೋತ್ಸವ ಆಚರಣೆಯಾಗಲಿ : ರಾಜು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಅಂದು ಸ್ವಾತಂತ್ರೋತ್ಸವಕ್ಕಾಗಿ ಜನರನ್ನು ಸಂಘಟನೆ ಮಾಡುವ ಉದ್ದೇಶದಿಂದ ಬಾಲಗಂಗಾಧರ ಟಿಳಕರವರು ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಪ್ರಾರಂಭಿಸಿದರು.

ಇಂದು ಧರ್ಮ ಜಾಗೃತಿಗಾಗಿ ಗಣೇಶೋತ್ಸವವನ್ನು ಆಚರಿಸುವ ಸಂಪ್ರದಾಯ ಬೆಳೆದು ಬರಬೇಕಾಗಿದೆ ಎಂದು ಗದಗ ಜಿಲ್ಲಾ ಸಾರ್ವಜನಿಕ ಗಜಾನೋತ್ಸವ ಮಹಾಮಂಡಳಿ ಅಧ್ಯಕ್ಷ ರಾಜಣ್ಣ ಮಲ್ಲಾಡದ, ಶ್ರೀರಾಮಸೇನಾ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನ ಎದುರಗಡೆ ನಡೆದ ಕಾರ್ಯಕ್ರಮದಲ್ಲಿ ತಾಲೂಕಾ ಸಾರ್ವಜನಿಕ ಗಜಾನನೋತ್ಸವ ಮಹಾಮಂಡಳಿ ವತಿಯಿಂದ ಸುಂದರವಾದ ಗಣೇಶ ಮೂರ್ತಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ಲೋಕಮಾನ್ಯ ಬಾಲಗಂಗಾಧರ ತಿಲಕರು ಜನರಲ್ಲಿ ಸ್ವಾತಂತ್ರ‍್ಯದ ಕಿಚ್ಚನ್ನು ಹೊರಗೆಡವುದರ ಸಲುವಾಗಿ ಇದನ್ನು ಸಾಧನವಾಗಿ ಬಳಸಿಕೊಂಡರು. ಸಾರ್ವಜನಿಕ ಗಣೇಶ ಚತುರ್ಥಿ ಅಂದರೆ ಡಿಜೆಗೆ ಅಷ್ಟೇ ಸೀಮಿತವಾಗಿರಬಾರದು.

131 ವರ್ಷದ ಹಿಂದೆ ಮನೆಗಳಿಗಷ್ಟೇ ಸೀಮಿತವಾಗಿದ್ದ ಗಣೇಶ ಹಬ್ಬ ಸಾರ್ವಜನಿಕವಾಗಿ ಎಲ್ಲಾ ಹಿಂದೂಗಳು ಜಾತಿ ಬೇಧ ಮರೆತು ಎಲ್ಲರೂ ಕೂಡಿಕೊಂಡು ಆಚರಣೆ ಮಾಡುವ ಉದ್ದೇಶ ಹೊಂದಿದೆ. ಗಣೇಶ ಹಬ್ಬದಲ್ಲಿ ನಮ್ಮ ಸಂಸ್ಕೃತಿ-ಪರಂಪರೆ ಉಳಿಸುವ ಕಾರ್ಯವನ್ನು ಯುವಕರು ಮಾಡಲಿ. ದಿನನಿತ್ಯ ಪೂಜೆ ಸಲ್ಲಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಕೊಂಡು ಗಣೇಶ ನಾಮ ಸ್ಮರಣೆ ಮಾಡುವ ಮೂಲಕ ಧರ್ಮ ಜಾಗೃತಿ ಮಾಡಬೇಕು ಎಂದು ಕರೆ ನೀಡಿದರು.

ಕೆಂಚಲಾಪುರ ಓಣಿಯ ಗಜಾನನ ಯುವಕ ಮಂಡಳಿ ಪ್ರಥಮ, ಪಿಎಸ್‌ಬಿಡಿ ಶಾಲೆ ಹತ್ತಿರ ಇರುವ ಈಶ್ವರ ಯುವಕ ಮಂಡಳಿ ದ್ವಿತೀಯ, ಹಳ್ಳದಕೇರಿ ಓಣಿಯ ಮಾರುತಿ ಯುವಕ ಮಂಡಳ ತೃತೀಯ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಾರ್ವಜನಿಕ ಗಜಾನನೋತ್ಸವ ಮಂಡಳಿ ಸಂಚಾಲಕ ಈರಣ್ಣ ಪ್ರಜಾರ, ಹಿಂದೂ ಮಹಾ ಸಭಾ ಗಣಪತಿ ಸಂಘದ ಅಧ್ಯಕ್ಷ ಫಕ್ಕೀರೇಶ ಅಣ್ಣಿಗೇರಿ, ಮಹೇಶ ಕಲಘಟಗಿ, ಮಹೇಶ ಮೇಟಿ, ಬಸವರಾಜ ಚಕ್ರಸಾಲಿ ಸೇರಿದಂತೆ ಅನೇಕ ಹಿಂದೂಪರ ಸಂಘಟನೆ ಕಾರ್ಯಕರ್ತರು, ಪಟ್ಟಣದ ಗಣೇಶ ಯುವಕ ಮಂಡಳಿ ಸದಸ್ಯರು ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!