HomePolitics Newsಕೇಂದ್ರ ಗೃಹ ಸಚಿವರಿಗೆ ಪತ್ರ: ಹಲಾಲ್ ಪ್ರಮಾಣಪತ್ರ ಹೊಂದಿರುವ ಸಂಸ್ಥೆಗಳನ್ನ ನಿಷೇಧಿಸುಂತೆ ಯತ್ನಾಳ್ ಆಗ್ರಹ

ಕೇಂದ್ರ ಗೃಹ ಸಚಿವರಿಗೆ ಪತ್ರ: ಹಲಾಲ್ ಪ್ರಮಾಣಪತ್ರ ಹೊಂದಿರುವ ಸಂಸ್ಥೆಗಳನ್ನ ನಿಷೇಧಿಸುಂತೆ ಯತ್ನಾಳ್ ಆಗ್ರಹ

For Dai;y Updates Join Our whatsapp Group

Spread the love

ಬೆಂಗಳೂರು:- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಹಲಾಲ್ ಪ್ರಮಾಣಪತ್ರ ಹೊಂದಿರುವ ಸಂಸ್ಥೆಗಳನ್ನ ನಿಷೇಧಿಸುಂತೆ ಆಗ್ರಹ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಈಗಾಗಲೇ ಹಲಾಲ್ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಇದೇ ರೀತಿ ದೇಶಾದ್ಯಂತ ಹಲಾಲ್ ಉತ್ಪನ್ನಗಳು ಹಾಗೂ ಅದನ್ನು ಪ್ರಮಾಣೀಕರಿಸುವ ಸಂಸ್ಥೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

ಪತ್ರದಲ್ಲಿ ಏನಿದೆ?

ಹಲಾಲ್ ಪ್ರಮಾಣೀಕರಣ ಸಂಸ್ಥೆಗಳ ಕಾರ್ಯಾಚರಣೆಗಳನ್ನು ನಿಷೇಧಿಸುವ ತುರ್ತು ಅಗತ್ಯವನ್ನು ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ. ನವೆಂಬರ್ 2023 ರಲ್ಲಿ ಹಲಾಲ್ ಪ್ರಮಾಣೀಕರಣ ಸಂಸ್ಥೆಗಳನ್ನು ನಿಷೇಧಿಸುವಂತೆ ಕೋರಿ ನಾನು ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್​​ ಅವರಿಗೆ ಪತ್ರ ಬರೆದಿದ್ದೆ.

ಧಾರ್ಮಿಕ ಸಂಸ್ಥೆಗಳ ಸೋಗಿನಲ್ಲಿ ಹಲವಾರು ಇಸ್ಲಾಮಿಕ್ ಸಂಸ್ಥೆಗಳು ಮಾಂಸ ಉತ್ಪಾದನೆ, ಆಹಾರ ಉತ್ಪನ್ನಗಳು, ಸೌಂದರ್ಯವರ್ಧಕಗಳು ಮತ್ತು ಇತರ ಗ್ರಾಹಕ ಸರಕುಗಳು ಸೇರಿದಂತೆ ವಿವಿಧ ವಲಯಗಳಲ್ಲಿ ‘ಹಲಾಲ್’ ಪ್ರಮಾಣೀಕರಣಗಳನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿವೆ. ಹಲಾಲ್ ಇಂಡಿಯಾ, ಜಮಿಯತ್ ಉಲೇಮಾ-ಐ-ಹಿಂದ್ ಹಲಾಲ್ ಟ್ರಸ್ಟ್, ಗ್ಲೋಬಲ್ ಇಸ್ಲಾಮಿಕ್ ಶರಿಯಾ, ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹಲಾಲ್ ಸರ್ಟಿಫಿಕೇಶನ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜಮಿಯತ್ ಉಲಾಮಾ-ಇ-ಮಹಾರಾಷ್ಟ್ರ ಸೇರಿವೆ.

ರೆಸ್ಟೋರೆಂಟ್‌, ಹೋಟೆಲ್‌, ಕಸಾಯಿಖಾನೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳಿಗೆ ಹಲಾಲ್ ಪ್ರಮಾಣೀಕರಣಗಳನ್ನು ನೀಡುವುದು ಸರಿಯಾದ ಮನೋಭಾವದಲ್ಲಿಲ್ಲ. ಈ ಪ್ರಮಾಣೀಕರಣಗಳು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳಿಗೆ ವಿರುದ್ಧವಾಗಿವೆ. ಹೆಚ್ಚುವರಿಯಾಗಿ, ಈ ಪ್ರಮಾಣೀಕರಣಗಳ ಮೂಲಕ ಸಂಗ್ರಹಿಸಲಾದ ಗಣನೀಯ ಹಣವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳು, ಭಯೋತ್ಪಾದನಾ ಬೆಂಬಲ, ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಕಾನೂನು ನೆರವು ಮತ್ತು ಭಯೋತ್ಪಾದನೆ ಮತ್ತು ಜಿಹಾದ್ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪುರಾವೆಗಳಿವೆ ಎಂದು ಉಲ್ಲೇಖಿಸಿದ್ದಾರೆ.

ಹಲಾಲ್ ಷರಿಯಾ ಕಾನೂನು ಅಡಿಯಲ್ಲಿ ಬರುತ್ತದೆ. ಆದರೆ ಭಾರತದಲ್ಲಿ ಇದಕ್ಕೆ ಯಾವುದೇ ಕಾನೂನಿನ ಮಾನ್ಯತೆಯಿಲ್ಲ. ಹೀಗಾಗಿ, ಹಲಾಲ್ ಪ್ರಮಾಣೀಕರಣವನ್ನು ನೀಡುವ ಪ್ರಕ್ರಿಯೆಯೇ ಕಾನೂನುಬಾಹಿರವಾಗಿದೆ. ಕಾನೂನಿನ ಪ್ರಕಾರ, FSSAI ಹೊರತುಪಡಿಸಿ ಬೇರೆ ಯಾವುದೇ ಪ್ರಾಧಿಕಾರವು ಜನಾಂಗೀಯ, ಧಾರ್ಮಿಕ ಗುರುತುಗಳ ಆಧಾರದ ಮೇಲೆ ಯಾವುದೇ ಉತ್ಪನ್ನವನ್ನು ಲೇಬಲ್ ಮಾಡಲು, ಅಧಿಕೃತಗೊಳಿಸಲು, ಪ್ರಮಾಣೀಕರಿಸಲು ಸಾಧ್ಯವಿಲ್ಲ. ಹಲಾಲ್ ಪ್ರಮಾಣೀಕರಣವನ್ನು ಒದಗಿಸುವ ಈ ಸಂಸ್ಥೆಗಳು ಕಾನೂನುಬಾಹಿರ ಕೃತ್ಯವನ್ನು ಮಾಡುತ್ತಿವೆ ಮತ್ತು ಈ ಪ್ರಮಾಣೀಕರಣವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸುವಂತೆ ಶಾಸಕ ಯತ್ನಾಳ್​ ಆಗ್ರಹಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!