HomeCrime Newsಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ..!

ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ..!

For Dai;y Updates Join Our whatsapp Group

Spread the love

ತುಮಕೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ ಪೋಕ್ಸೋ ಕೋರ್ಟ್ ನಿಂದ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಆರೋಪಿ ಬಸವರಾಜುಗೆ 1 ಲಕ್ಷ ದಂಡ ಸೇರಿ ಬಾಲಕನಿಗೆ 9 ಲಕ್ಷ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ತುಮಕೂರಿನ ಪ್ರತಿಷ್ಠಿತ ಶಾಲೆಯ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದ. ಘಟನೆಯ ದಿನ, ಬಾಲಕ ತನ್ನ ಅಣ್ಣನ ಹಾಸ್ಟೆಲ್‌ಗೆ ಹೋಗಿ ವಾಪಸ್ ಬರುವಾಗ ಆರೋಪಿ ಬಸವರಾಜು ತನ್ನ ಮೊಬೈಲ್‌ನಿಂದ ಬಾಲಕನ ತಂದೆಗೆ ಕರೆ ಮಾಡಲು ಅವಕಾಶ ನೀಡಿದನು.

ಈ ಸಂದರ್ಭವನ್ನು ಬಳಸಿಕೊಂಡ ಆರೋಪಿಯು ಬಾಲಕನಿಗೆ ಆಹಾರದ ಆಮಿಷವೊಡ್ಡಿ, ವಿಶ್ವಾಸವನ್ನು ಗಳಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಬಾಲಕ ತಾನು ಅನುಭವಿಸಿದ ಆಘಾತದಿಂದ ಯಾವುದೇ ವಿಷಯವನ್ನು ತಿಳಿಸಲಾಗದೇ, ಭಯದಿಂದ ಮೌನವಾಗಿದ್ದನು. ಆದರೆ, ಆತನ ಆರೋಗ್ಯ ಕ್ಷೀಣಿಸಿತು. ಕಳೆದೆಂದು ತಂದೆಗೆ ಕರೆ ಮಾಡಿ ಊರಿಗೆ ವಾಪಸ್ ಹೋದ ಬಾಲಕ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಪ್ರಕರಣ ಬಯಲಿಗೆ ಬಂದಿದ್ದು: ವೈದ್ಯರು ಬಾಲಕನ ರಕ್ತ ಪರೀಕ್ಷೆ ನಡೆಸಿ, ಲೈಂಗಿಕ ದೌರ್ಜನ್ಯ ವಿಷಯವನ್ನು ಪತ್ತೆಹಚ್ಚಿದರು. ತಕ್ಷಣವೇ, ಬಾಲಕನ ತಂದೆಯು ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇನ್ನೂ ಈ ತೀರ್ಪು ಬಾಲಕರ ಸುರಕ್ಷತೆ ಮತ್ತು ಲೈಂಗಿಕ ದೌರ್ಜನ್ಯ ವಿರುದ್ಧ ಕಾನೂನಿನ ಕಠಿಣ ಕ್ರಮದ ಮಹತ್ವದ ಸಂದೇಶ ನೀಡುತ್ತಿದೆ.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!