HomeGadag Newsಅಕ್ಷರಾಭ್ಯಾಸವಷ್ಟೇ ಇದ್ದರೆ ಸಾಲದು, ಜ್ಞಾನದ ಅವಶ್ಯಕತೆಯೂ ಬೇಕು: ಡಾ. ಎಸ್.ಸಿ. ಚವಡಿ

ಅಕ್ಷರಾಭ್ಯಾಸವಷ್ಟೇ ಇದ್ದರೆ ಸಾಲದು, ಜ್ಞಾನದ ಅವಶ್ಯಕತೆಯೂ ಬೇಕು: ಡಾ. ಎಸ್.ಸಿ. ಚವಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಕಲಿಕೋಪಕರಣಗಳ ಮೇಳ ಸಹಕಾರಿಯಾಗಿದೆ ಎಂದು ಡಾ. ಎಸ್.ಸಿ. ಚವಡಿ ಹೇಳಿದರು.

ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಕಲಿಕೋಪಕರಣಗಳ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಲದು. ಜ್ಞಾನದ ಅವಶ್ಯಕತೆ ಇಂದಿನ ದಿನಮಾನದಲ್ಲಿ ತುಂಬಾ ಅವಶ್ಯಕವಾಗಿದ್ದು, ನಿತ್ಯದ ಕಲಿಕೆಯೊಂದಿಗೆ ಹೆಚ್ಚು ಹೆಚ್ಚು ಆಸಕ್ತಿಯಿಂದ ಅಭ್ಯಾಸದಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗುತ್ತದೆ ಹಾಗೂ ಇಂತಹ ಚಟುವಟಿಕೆಗಳಿಂದ ಅತೀ ಶೀಘ್ರವಾಗಿ ಮನನ ಮಾಡಿಕೊಳ್ಳುತ್ತಾರೆ ಎಂದರು.

ಪ.ಪA ಸದಸ್ಯ ವಿಜಯ ನೀಲಗುಂದ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಕಲಿಕೋಪಕರಣ ಮೇಳ ಹಾಗೂ ವಿಜ್ಞಾನ ಮೇಳಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ಕಲಿಕೆಗೆ ಆಸಕ್ತಿ ಮೂಡುತ್ತದೆ. ಇದರಿಂದ ಶೈಕ್ಷಣಿಕವಾಗಿ ಮಕ್ಕಳು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ ಎಂದರು.

ಎಸ್‌ಡಿಎAಸಿ ಅಧ್ಯಕ್ಷ ಮಾಹಾಂತೇಶ ಕಣವಿ, ಶಾಲಾ ಪ್ರಧಾನ ಗುರು ಸಂಗಮೇಶ ತಮ್ಮಣ್ಣವರ, ಎಸ್.ಪಿ. ಸರ್ವದೆ, ಆರ್.ಎಂ. ರೋಣದ, ಕೆ.ಎಸ್. ಗಾಣಿಗೇರ, ಪಿ.ಎಸ್. ಮರಿದೇವರಮಠ, ಶೋಭಾ ಪಾಟೀಲ್, ಬಸಮ್ಮಾ ಲದ್ದಿ, ಎಸ್‌ಡಿಎಂಸಿ ಸದಸ್ಯರಾದ ಮಾಹಾಂತೇಶ ಹುಲ್ಲೂರ, ನಿವೇದಿತಾ ಗೌಳಿ, ಶೈಲಾ ಬಾತಾಖಾನಿ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!