ಬೆಂಗಳೂರು:- ಇಂದು ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 10 ಕಡೆ ಲೋಕಾಯುಕ್ತ ರೇಡ್ ನಡೆಸಿದ್ದು, ದಾಳಿ ವೇಳೆ ಭ್ರಷ್ಟ ಅಧಿಕಾರಿಗಳ ಆಸ್ತಿ ಕಂಡು ಲೋಕಾ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 10 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ವಿವಿಧ ಇಲಾಖೆಯ ಅಧಿಕಾರಿಗಳ ಮನೆ ಮತ್ತು ಕಚೇರಿಗಳಲ್ಲಿ ಶೋಧ ನಡೆಸಿದ್ದಾರೆ. ಈ ವೇಳೆ ಹಲವರ ಮನೆಯಲ್ಲಿ ಚಿನ್ನಾಭರಣ, ನಗದು, ಆಸ್ತಿ ಪತ್ರಗಳು ಮತ್ತು ಐಷಾರಾಮಿ ವಾಹನಗಳು ಪತ್ತೆಯಾಗಿವೆ.
ಇಂದು ಲೋಕಾ ದಾಳಿಗೆ ಒಳಗಾದ ಅಧಿಕಾರಿಗಳು:
ಬೆಂಗಳೂರು- ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ.
ಹಾವೇರಿ- ಶ್ರೀ. ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ, ಕಾರ್ಯಪಾಲಕ ಅಭಿಯಂತರರು, ಡಿಯುಡಿಸಿ
ಮಂಡ್ಯ- ನಗರ ಪಾಲಿಕೆ CAO ಪುಟ್ಟಸ್ವಾಮಿ.
ಬೀದರ್- ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್.
ಮೈಸೂರು- ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ.
ಧಾರವಾಡ- ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ.
ಧಾರವಾಡ- ಪಶು ಕ್ಲಿನಿಕ್ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್.
ಶಿವಮೊಗ್ಗ- SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ ಸಿ.ಎನ್.
ದಾವಣಗೆರೆ- APMC ಸ. ನಿರ್ದೇಶಕ ಪ್ರಭು ಜೆ.
ಮೈಸೂರು- ಮಡಿಕೇರಿ PWD, ಸ.ಅ.ಇಂಜಿನಿಯರ್ ಗಿರೀಶ್ ಡಿ.ಎಂ.
ಯಾರ್ಯಾರ ಮನೆಯಲ್ಲಿ ಏನೇನ್ ಸಿಕ್ತು, ಇಲ್ಲಿದೆ ಕಂಪ್ಲಿಟ್ ಡಿಟೈಲ್ಸ್:
1. ಬೆಂಗಳೂರು- ಎಲೆಕ್ಟ್ರಾನಿಕ್ ಸಿಟಿ ಆರ್ಟಿಒ ಕಚೇರಿ ಶಾಖಾಧೀಕ್ಷಕ ಕೃಷ್ಣಮೂರ್ತಿ ಪಿ.
ಅಧಿಕಾರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಶೋಧ ನಡೆದಿದ್ದು, 4 ಕೋಟಿ 26 ಲಕ್ಷ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಗಿದೆ. 3 ಕೋಟಿ 34 ಲಕ್ಷ ಮೌಲ್ಯದ ಸ್ಥಿರಾಸ್ತಿ, 7 ನಿವೇಶನಗಳು, 4 ವಾಸದ ಮನೆಗಳು, 5 ಎಕರೆ 30 ಗುಂಟೆ ಕೃಷಿ ಜಮೀನು ಸೇರಿ ಒಟ್ಟು 3 ಕೋಟಿ 30 ಲಕ್ಷ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ. 92 ಲಕ್ಷ ಮೌಲ್ಯದ ಚರಾಸ್ತಿ, 22 ಲಕ್ಷ ನಗದು, 32 ಲಕ್ಷ ಮೌಲ್ಯದ ಚಿನ್ನಾಭರಣ, 16 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು, 22 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿದೆ.
2. ಮೈಸೂರು- ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್ಪೆಕ್ಟರ್ ರಾಮಸ್ವಾಮಿ ಸಿ.
ದಾಳಿ ವೇಳೆ 2 ಕೋಟಿ 77 ಲಕ್ಷದ 75 ಸಾವಿರದ 760 ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಗಿದೆ. ಅಧಿಕಾರಿಗೆ ಸಂಬಂಧಿಸಿದ 3 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದ ಲೋಕಾಯುಕ್ತ.. 1 ಕೋಟಿ 65 ಲಕ್ಷದ 54 ಸಾವಿರ ಸ್ಥಿರಾಸ್ತಿ ಪತ್ತೆ ಮಾಡಿದ್ದಾರೆ.
3 ನಿವೇಶನಗಳು, 2 ವಾಸದ ಮನೆಗಳು, 7 ಎಕರೆ ಕೃಷಿ ಭೂಮಿ ಪತ್ತೆ ಆಗಿದ್ದು, 1 ಕೋಟಿ 12 ಲಕ್ಷ 21 ಸಾವಿರದ 760ರೂ ಮೌಲ್ಯದ ಚರಾಸ್ಥಿ, 1 ಕೋಟಿ 15 ಲಕ್ಷದ 660 ರೂ ನಗದು, 86 ಲಕ್ಷ 26 ಸಾವಿರ 100 ರೂ. ಮೌಲ್ಯದ ಚಿನ್ನಾಭರಣ, 14 ಲಕ್ಷ ಮೌಲ್ಯದ ವಾಹನಗಳು, 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ. 1 ಕೋಟಿ 12 ಲಕ್ಷದ 21 ಸಾವಿರ 760 ರೂ. ಮೌಲ್ಯದ ಇತರೆ ವಸ್ತುಗಳು ಕೂಡ ಪತ್ತೆಯಾಗಿದೆ.
3. ದಾವಣಗೆರೆ- APMC ಸ. ನಿರ್ದೇಶಕ ಪ್ರಭು ಜೆ.
ಅಧಿಕಾರಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಶೋಧ ನಡೆದಿದೆ. ದಾಳಿ ವೇಳೆ 2 ಕೋಟಿ 49 ಲಕ್ಷ 99,850 ರೂ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಗಿದೆ. 1 ಕೋಟಿ 4 ಲಕ್ಷದ 69 ಸಾವಿರ ಮೌಲ್ಯದ ಐದು ನಿವೇಶನ, 3 ವಾಸದ ಮನೆ, 3 ಎಕರೆ ಕೃಷಿ ಭೂಮಿಯ ಕಾಗದ ಪತ್ರಗಳು. 1 ಕೋಟಿ 45 ಲಕ್ಷದ 30 ಸಾವಿರದ 850 ಮೌಲ್ಯದ ಚರಾಸ್ತಿ, 7 ಲಕ್ಷದ 20 ಸಾವಿರದ 850 ನಗದು ಹಣ, 85 ಲಕ್ಷದ 60 ಸಾವಿರ ಮೌಲ್ಯದ ಚಿನ್ನಾಭರಣ, 12 ಲಕ್ಷ ಮೌಲ್ಯದ ವಾಹನಗಳು, 40 ಲಕ್ಷದ 50 ಸಾವಿರ ಮೌಲ್ಯದ ಇತರೆ ಮತ್ತೆ ಗೃಹಪಯೋಗಿ ವಸ್ತು ಪತ್ತೆಯಾಗಿದೆ.
4. ಮಂಡ್ಯ- ನಗರ ಪಾಲಿಕೆ CAO ಪುಟ್ಟಸ್ವಾಮಿ.
ಅಧಿಕಾರಿಗೆ ಸಂಬಂಧಿಸಿದ ಒಟ್ಟು ಮೂರು ಕಡೆ ದಾಳಿ ನಡೆಸಿದ್ದ ಲೋಕಾಯುಕ್ತ, 4 ಕೋಟಿ 37 ಲಕ್ಷದ 45 ಸಾವಿರ ಮೌಲ್ಯದ ಸ್ಥಿರಾಸ್ತಿ, ಚರಾಸ್ಥಿ ಪತ್ತೆ ಮಾಡಿದ್ದಾರೆ. 3 ಕೋಟಿ 48 ಲಕ್ಷದ 45 ಸಾವಿರ ಮೌಲ್ಯದ ಚಿರಾಸ್ಥಿ, 8 ನಿವೇಶನ, 2 ವಾಸದ ಮನೆ, 12 ಎಕರೆ ಕೃಷಿ ಜಮೀನು, 72ಲಕ್ಷದ 28 ಸಾವಿರದ ಇತರೆ ಆಸ್ತಿ ಪತ್ರಗಳು ಪತ್ತೆ ಮಾಡಿದ್ದಾರೆ. 89 ಲಕ್ಷ ಮೌಲ್ಯದ ಚರಾಸ್ಥಿ, 1 ಲಕ್ಷದ 75 ಸಾವಿರ ನಗದು, 25 ಲಕ್ಷ ಮೌಲ್ಯದ ಚಿನ್ನಾಭರಣಗಳು, 33 ಲಕ್ಷ ಮೌಲ್ಯದ ವಾಹನಗಳು.. 29 ಲಕ್ಷದ 25 ಸಾವಿರ ಮೌಲ್ಯದ ಇತರೆ ವಸ್ತುಗಳು ಪತ್ತೆ ಮಾಡಿದ್ದಾರೆ.
5. ಬೀದರ್- ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್:
ಅಧಿಕಾರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧ ನಡೆದಿದೆ. ದಾಳಿ ವೇಳೆ 4 ಕೋಟಿ 7 ಲಕ್ಷ 65,552 ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆ ಆಗಿದೆ. 2 ಕೋಟಿ 43 ಲಕ್ಷ ಮೌಲ್ಯದ ಸ್ಥಿರಾಸ್ತಿ, 4 ನಿವೇಶನಗಳು, 1 ವಾಸದ ಮನೆ, 24 ಎಕರೆ 30 ಗುಂಟೆ ಕೃಷಿ ಜಮೀನಿಗೆ ಸಂಬಂಧಿಸಿದ ಆಸ್ತಿ ಪತ್ರಗಳು ಪತ್ತೆ ಆಗಿದೆ. 1 ಕೋಟಿ 64 ಲಕ್ಷದ 6,552 ಮೌಲ್ಯದ ಚರಾಸ್ತಿ ಪತ್ತೆ ಆಗಿದ್ದು, 62 ಲಕ್ಷ ಬ್ಯಾಂಕ್ ಠೇವಣಿ, 50 ಲಕ್ಷದ 75,000 ಮೌಲ್ಯದ ಚಿನ್ನಾಭರಣ, 42 ಲಕ್ಷದ 48,000ಬೆಲೆಬಾಳುವ ವಾಹನಗಳು, 8 ಲಕ್ಷದ 83,552 ಇತರೆ ವಸ್ತುಗಳು ಪತ್ತೆ ಆಗಿದೆ.
6. ಹಾವೇರಿ- ಶ್ರೀ. ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ:
ಅಧಿಕಾರಿಗೆ ಸೇರಿದ 6 ಸ್ಥಳಗಳಲ್ಲಿ ಶೋಧ ನಡೆದಿದೆ. 5 ಕೋಟಿ 36 ಲಕ್ಷದ 34, 880ರೂ ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಪತ್ತೆ ಆಗಿದೆ. 3 ಕೋಟಿ 67ಲಕ್ಷದ 42,200 ಮೌಲ್ಯದ ಚಿರಾಸ್ತಿ ಪತ್ತೆ ಆಗಿದ್ದು, 14 ನಿವೇಶನಗಳು, 3 ವಾಸದ ಮನೆಗಳಿಗೆ ಸಂಬಂಧಿಸಿದ ದಾಖಲೆ ಪತ್ತೆ ಆಗಿದೆ. 1 ಕೋಟಿ 68 ಲಕ್ಷ 92, 680 ಮೌಲ್ಯದ ಚರಾಸ್ತಿ ಪತ್ತೆ ಆಗಿದೆ. 10ಲಕ್ಷದ 44, 830 ನಗದು, 25 ಲಕ್ಷದ 40,000 ಮೌಲ್ಯದ ಚಿನ್ನಾಭರಣ, 15 ಲಕ್ಷ ಮೌಲ್ಯದ ವಾಹನಗಳು, 1 ಕೋಟಿ 18 ಲಕ್ಷದ 7,850 ಬೆಲೆಯ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಪತ್ತೆ ಆಗಿದೆ.
7. ಧಾರವಾಡ- ಕರ್ನಾಟಕ ವಿಶ್ವ ವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ:
ಅಧಿಕಾರಿಗೆ ಸೇರಿದ 6 ಸ್ಥಳಗಳಲ್ಲಿ ಶೋಧ ನಡೆದಿದೆ. 3 ಕೋಟಿ 11 ಲಕ್ಷದ 95,400 ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಪತ್ತೆ.. 2 ಕೋಟಿ 59 ಲಕ್ಷದ 800 ಮೌಲ್ಯದ ಸ್ಥಿರಾಸ್ತಿ ಪತ್ತೆ.. 5 ನಿವೇಶನಗಳು, 2 ವಾಸದ ಮನೆಗಳು, 18 ಎಕರೆ 21 ಗುಂಟೆ ಕೃಷಿ ಜಮೀನಿಗೆ ಸಂಬಂಧಿಸಿದ ಆಸ್ತಿಪತ್ರಗಳು ಪತ್ತೆ.. 52 ಲಕ್ಷದ 87, 400 ಮೌಲ್ಯದ ಚರಾಸ್ತಿ ಪತ್ತೆ.. 1 ಲಕ್ಷದ 12, 400 ನಗದು, 6 ಲಕ್ಷದ 75,000 ಮೌಲ್ಯದ ಚಿನ್ನಾಭರಣ, 37 ಲಕ್ಷ ಮೌಲ್ಗದ ವಾಹನಗಳು, 8 ಲಕ್ಷ ಮೌಲ್ಯದ ಇತರೆ ವಸ್ತುಗಳು ಪತ್ತೆ ಹಚ್ಚಿದ್ದಾರೆ.
8. ಗದಗ- ಶ್ರೀ. ಸತೀಶ್ ರಾಮಣ್ಣ ಕಟ್ಟಿಮನಿ, ಹಿರಿಯ ಪಶು ಪರಿವೀಕ್ಷಕರು, ಪ್ರಾಥಮಿಕ ಪಶು ಆಸ್ಪತ್ರೆ, ಹುಲಿಗೋಳ್
ಅಧಿಕಾರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆದಿದೆ. 2 ಕೋಟಿ 9 ಲಕ್ಷದ 7,899 ರೂ ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಪತ್ತೆ.. 55 ಲಕ್ಷದ 50,000 ಮೌಲ್ಯದ ಚಿರಾಸ್ಥಿ.. 2 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು ಪತ್ರಗಳು ಪತ್ತೆ.. 1 ಕೋಟಿ 53 ಲಕ್ಷದ 57,899 ರೂ ಮೌಲ್ಯದ ಚರಾಸ್ತಿ.. 17 ಲಕ್ಷದ 16,805 ನಗದು, 74 ಲಕ್ಷದ 80,806 ಮೌಲ್ಯದ ಚಿನ್ನಾಭರಣ.. 25 ಲಕ್ಷ ಮೌಲ್ಯದ ವಾಹನಗಳು, 36 ಲಕ್ಷದ 60, 288 ಬ್ಯಾಂಕ್ ಠೇವಣಿ, ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಷೇರ್ ನಲ್ಲಿ ಇನ್ವೆಸ್ಟ್ ಮಾಡಿರೋದು ಪತ್ತೆ ಮಾಡಿದ್ದಾರೆ.
9. ಮೈಸೂರು- ಮಡಿಕೇರಿ PWD, ಸ.ಅ.ಇಂಜಿನಿಯರ್ ಗಿರೀಶ್ ಡಿ.ಎಂ:
ಅಧಿಕಾರಿಗೆ ಸೇರಿದ 4 ಸ್ಥಳಗಳಲ್ಲಿ ಶೋಧ ನಡೆದಿದೆ. ದಾಳಿ ವೇಳೆ 4 ಕೋಟಿ 26 ಲಕ್ಷದ 48,405 ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಪತ್ತೆ.. 1 ಕೋಟಿ 89ಲಕ್ಷದ 94,000 ಮೌಲ್ಯದ ಸ್ಥಿರಾಸ್ತಿ ಪತ್ತೆ.. 4 ನಿವೇಶನಗಳು, 1 ವಾಸದ ಮನೆಗಳ ದಾಖಲೆ ಪತ್ತೆ.. 2 ಕೋಟಿ 36 ಲಕ್ಷದ 54,405ರೂ ಮೌಲ್ಯದ ಚಿರಾಸ್ತಿ ಪತ್ತೆ.. 5 ಲಕ್ಷದ 53,715 ನಗದು, 1 ಕೋಟಿ 81ಲಕ್ಷದ 92,690 ಮೌಲ್ಯದ ಚಿನ್ನಾಭರಣ.. 9 ಲಕ್ಷದ 8,000 ಮೌಲ್ಯದ ವಾಹನಗಳು, 4ಲಕ್ಷ ಮೌಲ್ಯದ – ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಪತ್ತೆ ಮಾಡಿದ್ದಾರೆ.
10. ಶಿವಮೊಗ್ಗ- SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ ಸಿ.ಎನ್.
ಅಧಿಕಾರಿಗೆ ಸೇರಿದ 5 ಸ್ಥಳಗಳಲ್ಲಿ ಶೋಧ ನಡೆದಿದೆ. 2ಕೋಟಿ 49 ಲಕ್ಷದ 63,481 ಮೌಲ್ಯದ ಸ್ಥಿರಾಸ್ತಿ, ಚರಾಸ್ತಿ ಪತ್ತೆ.. 1 ಕೋಟಿ 63 ಲಕ್ಷದ 80,000 ಮೌಲ್ಯದ ಸ್ಥಿರಾಸ್ತಿ ಪತ್ತೆ.. 3 ವಾಸದ ಮನೆಗಳು, 3 ಎಕರೆ 20 ಗುಂಟೆ ಕೃಷಿ ಜಮೀನು ಪತ್ರಗಳು ಪತ್ತೆ.. 85 ಲಕ್ಷದ 83,481ಮೌಲ್ಯದ ಚರಾಸ್ತಿ ಪತ್ತೆ.. 12 ಲಕ್ಷದ ,720/- ನಗದು, 23 ಲಕ್ಷದ 29 ಸಾವಿರದ 880ರೂ ಬೆಲೆ ಬಾಳುವ ಚಿನ್ನಾಭರಣಗಳು, 23 ಲಕ್ಷದ 4,000ದೂ ಬೆಲೆ ಬಾಳುವ ವಾಹನಗಳು, 27ಲಕ್ಷದ 47, 881ರೂ ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಪತ್ತೆ ಮಾಡಿದ್ದಾರೆ.
ಸದ್ಯ ಎಲ್ಲವನ್ನ ವಶಪಡೆದು ಲೋಕಾಯುಕ್ತ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಲೋಕಾಯುಕ್ತ ಅಧಿಕಾರಿಗಳ ದಾಳಿಯಿಂದ ಭ್ರಷ್ಟ ಅಧಿಕಾರಿಗಳು ಕಂಗಾಲಾಗಿದ್ದಾರೆ.



