ಕಲಬುರಗಿ: ಕಮಲಾಪುರ ತಾಲೂಕಿನ ಕುರಿಕೋಟಾ ಬಳಿ ಸೇತುವೆಯಿಂದ ನೀರಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನ ಅನೀಲ್ ಹಾಗು ಸಂಧ್ಯಾರಾಣಿ ಅಂತ ಗುರುತಿಸಲಾಗಿದೆ. ಅನಿಲ ಕುಮಾರ್ ಮೃತದೇಹ ಬೆಣ್ಣೆತೋರಾ ನದಿಯಲ್ಲಿ ಪತ್ತೆಯಾಗಿದೆ.
ಈತ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕುಣಿ ಸಂಗಾವಿ ಗ್ರಾಮದ ನಿವಾಸಿಯಾಗಿದ್ದಾನೆ. ಅನಿಲನ ಜೊತೆ ನದಿಗೆ ಹಾರಿದ ಯುವತಿಗಾಗಿ ಶೋಧ ನಡೆಯುತ್ತಿದೆ. ಸ್ಥಳಕ್ಕೆ ಮಹಾಗಾಂವ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.



