HomeCrime Newsಮಚ್ಚು ಹಿಡಿದು ರೀಲ್ಸ್ ಪ್ರಕರಣ: ರಜತ್, ವಿನಯ್‌ ಮತ್ತೆ ಪೊಲೀಸ್ ವಶಕ್ಕೆ!

ಮಚ್ಚು ಹಿಡಿದು ರೀಲ್ಸ್ ಪ್ರಕರಣ: ರಜತ್, ವಿನಯ್‌ ಮತ್ತೆ ಪೊಲೀಸ್ ವಶಕ್ಕೆ!

For Dai;y Updates Join Our whatsapp Group

Spread the love

ಬೆಂಗಳೂರು: ಬಿಗ್​ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಅವರು ಮಚ್ಚು ಹಿಡಿದು ರೀಲ್ಸ್ ಮಾಡಿದ ಪ್ರಕರಣ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಹಾಗೂ ರಜತ್ ಇಬ್ಬರನ್ನು ಮತ್ತೆ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ವಿನಯ್ ಮತ್ತು ರಜತ್‌ರನ್ನು ನಿನ್ನೆ ಬಂಧಿಸಿದ್ದರು. ಆ ನಂತರ ಮಧ್ಯಾರಾತ್ರಿ ಅವರನ್ನು ಬಿಡುಗಡೆ ಮಾಡಿದ್ದರು. ಇಂದು ಮತ್ತೆ ವಿಚಾರಣೆಗೆ ಬಂದ ವೇಳೆ ರಜತ್‌ ಮತ್ತು ವಿನಯ್‌ರನ್ನು ಬಂಧಿಸಿದ್ದಾರೆ.

ಜಪ್ತಿ ಮಾಡಿರೋ ಲಾಂಗ್‌ಗೂ ರೀಲ್ಸ್‌ನಲ್ಲಿರೋ ಲಾಂಗ್‌ಗೂ ವ್ಯತ್ಯಾಸ ಕಂಡು ಬಂದಿದೆ. ಪೊಲೀಸ್‌ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ಅನುಮಾನದ ಮೇಲೆ ಇದೀಗ ತನಿಖೆ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ರಜತ್‌ ಮತ್ತು ವಿನಯ್‌ರನ್ನು ಬಂಧಿಸಿದ್ದಾರೆ.

ನಾಗರಭಾವಿಯ ಅಕ್ಷಯ್ ಸ್ಟುಡಿಯೋಗೂ ಪೊಲೀಸರು ಕರೆದೊಯ್ಯಲಿದ್ದಾರೆ. ಸದ್ಯ ಪೊಲೀಸರ ಬಳಿ ಇರುವ ಮಚ್ಚು ಅದಲ್ಲ ಎಂದು ಆರೋಪಿಗಳು ಹೇಳಿಕೆ ಕೂಡ ನೀಡಿದ್ದಾರೆ ಎನ್ನಲಾಗಿದೆ. ಮಚ್ಚು ಸ್ಟುಡಿಯೋದಲ್ಲಿ ಮಿಸ್ ಮ್ಯಾಚ್ ಆಗಿದೆ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಸ್ಟುಡಿಯೋಗೆ ಹೋಗಿ ಪರಿಶೀಲನೆಗೆ ಮುಂದಾಗಿದ್ದಾರೆ ಪೊಲೀಸರು. ಅಲ್ಲಿ ಮಚ್ಚು ಸಿಕ್ಕಿಲ್ಲ ಅಂದ್ರೆ ಬಹುತೇಕ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!