ವಿಜಯಸಾಕ್ಷಿ ಸುದ್ದಿ, ಗದಗ: ನಗರದ ತೋಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟಿçಕಲ್ ಆ್ಯಂಡ್ ಇಲೆಕ್ಟಾçನಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಮಲ್ಲಿಕಾರ್ಜುನ ಜಿ.ಡಿ ಇವರು ಪಿಎಚ್ಡಿ ಪದವಿಗಾಗಿ ತುಮಕೂರಿನ ಪ್ರತಿಷ್ಠಿತ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್(ಸಾಹೆ, ಡಿಮ್ಡ್ ವಿಶ್ವವಿದ್ಯಾಲಯ)ಗೆ ಮಂಡಿಸಿದ ಅನಾಲಿಸಿಸ್ ಆಫ್ ಪವರ್ ಕ್ವಾಲೀಟಿ ಫಾರ್ ಗ್ರಿಡ್ ಕನೆಕ್ಟೆಡ್ ಸೋಲಾರ್ ಪಿ.ವಿ ಸಿಸ್ಟಮ್ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಲಭಿಸಿದ್ದು, ತುಮಕೂರಿನಲ್ಲಿ ನಡೆದ 13ನೇ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಮತ್ತು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಪಿಎಚ್ಡಿ ಪದವಿ ಪ್ರದಾನ ಮಾಡಿದರು.
ಎಸ್ಎಸ್ಐಟಿ ಕಾಲೇಜಿನ ಪ್ರಾಧ್ಯಾಪಕ ಡಾ. ಜಿ.ಎಸ್. ಶೇಷಾದ್ರಿ ಮಾರ್ಗದರ್ಶನದಲ್ಲಿ ಪಿಎಚ್ಡಿ ಮಹಾ ಪ್ರಬಂಧ ಮಂಡಿಸಿದ್ದರು. ಮಲ್ಲಿಕಾರ್ಜುನ ಜಿ.ಡಿ ಮೂಲರ್ತ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದವರಾಗಿದ್ದಾರೆ. ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಎಐಸಿಟಿಇನ ಚೇರ್ಮನ್ ಡಾ. ಟಿ.ಜಿ. ಸೀತಾರಾಮ್, ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಲಿಂಗೇಗೌಡ ಕೆ.ಬಿ, ಕುಲಸಚಿವ ಡಾ. ಎಮ್.ಜೆಡ್. ಕುರಿಯನ್, ಮೌಲ್ಯಮಾಪನ ಕುಲಸಚಿವ ಡಾ. ಗುರುಶಂಕರ್.ಜಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇವರ ಈ ಸಾಧನೆಗೆ ತೋಂಟದಾರ್ಯ ಮಠದ ಪೀಠಾಧಿಪತಿಗಳಾದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎA. ಆವಟಿ, ವಿಭಾಗದ ಮುಖ್ಯಸ್ಥ ಡಾ. ಈರಣ್ಣ ಕೋರಚಗಾವ್, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.



