HomeKarnataka Newsಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ: ಸಂಸದ ಬೊಮ್ಮಾಯಿ ಸಂತಾಪ

ಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ: ಸಂಸದ ಬೊಮ್ಮಾಯಿ ಸಂತಾಪ

For Dai;y Updates Join Our whatsapp Group

Spread the love

ಹುಬ್ಬಳ್ಳಿ: ಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ  ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇಡೀ ದೇಶ ದುಃಖದಲ್ಲಿ ಮುಳುಗಿದ್ದು ಒಬ್ಬ ವ್ಯಕ್ತಿ ಇಲ್ಲದೇ ಇರುವಾಗ ಅವರ ಮಹತ್ವ ಗೊತ್ತಾಗುತ್ತದೆ ಅವರು ಮಾಡಿ ಕಾರ್ಯ ಗೊತ್ತಾಗುತ್ತದೆ. ಮನಮೋಹನ್ ಸಿಂಗ್ ಒಬ್ಬ ಸಾಮಾನ್ಯ ರಾಜಕಾರಣಿ ಆಗಿರಲಿಲ್ಲ.

ಅವರು ಪ್ರೋಪೇಷರ್ ಆಗಿ ವರ್ಲ್ಡ್ ಬ್ಯಾಂಕ್ ನಲ್ಲಿ ಕೆಲಸ ಮಾಡಿ ಓರ್ವ ಆರ್ಥಿಕ ತಜ್ಞರಾಗಿ ಕೆಲಸ ಮಾಡಿದವರು. ಅಂದಿ‌ನ ಪ್ರಧಾನ ಮಂತ್ರಿ ನರಸಿಂಹ ರಾವ್ ಅವರನ್ನ ಆರ್ಥಿಕ ಮಂತ್ರಿ ಮಾಡಿದವರು.ಇವರ ಬಗ್ಗೆ ಒಂದು ಮಾತು ಹೇಳಿದರೆ ತಪ್ಪಾಗಲಾರದು ಅಂದಿನ ಆರ್ಥಿಕ ಸಚಿವ ಮನಮೋಹನ್ ಸಿಂಗ್ ಅವರಿಗೆ ಆಗಲಿ ಪ್ರಧಾನ ಮಂತ್ರಿ ನರಸಿಂಹ ಅವರಿಗೆ ಆಗಲಿ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ. ಇದೇ ರೀತಿ ಆಡಳಿತ ಮಾಡಬೇಕು ಎಂಬ ಒತ್ತಡ ಮಾಡಬೇಕು ಇವರಿಗೆ ಒಳ್ಳೆಯ ಅವಕಾಶ ಇತ್ತು.

ಇದ್ದ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಅವಕಾಶ ಒದಗಿ ಬಂದಿತು. ಸಾಮಾನ್ಯವಾಗಿ ನಾವು ಯಾರನ್ನ ಆಕಸ್ಮಿಕವಾಗಿ ಇರುವ ನಾಯಕರನ್ನ ಬಿಂಬಿಸುತ್ತೇವೆ ಅವರನ್ನ ಅಸಾಧಾರಣವಾದ ಕೆಲಸ ಆಗಿತ್ತೆವೆ ಏಕೆಂದರೆ ಯಾವುದೇ ಕಟ್ಟು ಪಾಡು ಅವರಿಗೆ ಇರಲ್ಲ. ಜಾಗತೀಕರಣ ಉದಾರೀಕರಣ ಅಂದಿನ ದಿನಗಳಲ್ಲಿ ಮಾಡಿದ್ದಿಂದ ವಿದೇಶಿ  ಬಂಡವಾಳ ಹೆಚ್ಚಾಯಿತು. ಐಎಂಎಫ್ ಆರ್ಥಿಕ ಸಹಾಯ ಸಹ ಸಿಕ್ಕಿತು ರಾಜಕೀಯ ದಿವಾಳಿತನವಾಗುವುದನ್ನ ತಡೆದರು. ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಆದವು   ಎಂದು ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!