HomeGadag Newsನಮ್ಮ ದೃಷ್ಟಿಯಂತೆ ಸೃಷ್ಟಿ ಕಾಣುವುದು : ಗವಿಸಿದ್ದೇಶ್ವರ ಸ್ವಾಮಿಜಿ

ನಮ್ಮ ದೃಷ್ಟಿಯಂತೆ ಸೃಷ್ಟಿ ಕಾಣುವುದು : ಗವಿಸಿದ್ದೇಶ್ವರ ಸ್ವಾಮಿಜಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಭೂಮಂಡಲದಲ್ಲಿ ನಮಗಾಗಿ ಜಲ, ನೆಲ, ಭೂಮಿ, ಗಾಳಿ ಸಂಪತ್ತನ್ನು ದೇವರು ನೀಡಿದ್ದಾನೆ. ಸಂತರು, ಶರಣರು ತಮ್ಮ ಆಗಾದ ದೃಷ್ಟಿಕೋನಗಳಿಂದ ಈ ಸೃಷ್ಟಿಯಲ್ಲಿ ಬಾಳಿ ಬೆಳಕಾದವರು. ಅಂತವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗುವುದರಿಂದ ಈ ಸೃಷ್ಟಿಯಲ್ಲಿ ಸಂತೋಷದಿಂದ ಬಾಳಬೇಕಾಗಿದೆ. ನಮ್ಮ ದೃಷ್ಟಿಯಂತೆ ಸೃಷ್ಟಿ ಕಾಣುವುದು ಎಂದು ಕೊಪ್ಪಳ ಗವಿಸಿದ್ದೇಶ್ವರಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮಿಜಿ ಹೇಳಿದರು.

ಅವರು ಪಟ್ಟಣದ ಬಸವೇಶ್ವರ ನಗರದ ನೂತನ ಮಾರುತಿ ದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಮಾಹಸ್ವಾಮೀಜಿ ಮಾತನಾಡಿ, ನಾವು ಪ್ರಪಂಚವನ್ನು ಒಳ್ಳೆಯ ದೃಷ್ಟಿಕೋನದಿಂದ ಕಾಣಬೇಕು. ಪ್ರತಿ ವಸ್ತು, ವ್ಯಕ್ತಿ, ವಿಷಯ, ವಿಚಾರ ಜೀವನದಲ್ಲಿ ಎದುರಾಗುವ ಪರಿಸ್ಥಿತಿಗಳನ್ನು ಸಹ ನಾವೆಲ್ಲರೂ ಒಳ್ಳೆಯ ದೃಷ್ಟಿಯಿಂದ ಕಾಣಬೇಕು ಎಂದರು.

ನೀಲಗುಂದ ಗುದ್ನೇಶ್ವರಮಠದ ಪ್ರಭುಲಿಂಗ ದೇವರು ಮಾತನಾಡಿದರು. ಅಧ್ಯಕ್ಷತೆಯನ್ನು ಗುರಣ್ಣಾ ನೀಲಗುಂದ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಯುವ ಮುಖಂಡ ಶರಣು ಪಾಟೀಲ್, ಗಣ್ಯರಾದ ಶಿವಣ್ಣಾ ನೀಲಗುಂದ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಹನುಮಂತಪ್ಪ ಬೀಡನಾಳ, ಕೃಷ್ಣಾ ಕುಷ್ಠಗಿ, ಬಿ.ಶರಣಪ್ಪ, ರಾಮಣ್ಣಾ ಕಮಾಜಿ, ಬಿ.ವಿ. ಸುಂಕಾಪೂರ, ಎಸ್.ಸಿ. ಬಡ್ನಿ, ಶಿವಣ್ಣಾ ಚರಾರಿ, ಮಹೇಶ ದೇಸಾಯಿ, ಪರಶುರಾಮ ವಂಟಕರ್, ಅಶೋಕ ಸೋನಗೋಜಿ, ಕೆ.ಎಲ್. ಕರಿಗೌಡ್ರ, ಸಂಜಯ ನೀಲಗುಂದ, ಹೋನ್ನಪ್ಪ ನೀಲಗುಂದ, ಶಿದ್ದಪ್ಪ ಶಿರಹಟ್ಟಿ, ವೇಂಕಟೇಶ, ಇಮ್ಮಣ್ಣಾ ಶೇಖ, ದ್ಯಾಮಣ್ಣಾ ನೀಲಗುಂದ, ನಾಗರಾಜ ದೇಶಪಾಂಡೆ, ಅಶೋಕ ಹುಣಶಿಮರದ, ಲಿಂಗರಾಜ ಬಟ್ಟೂರ, ಬಸವರಾಜ ಹಾರೋಗೇರಿ, ಜೈ ಮಾರುತಿ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!