HomeCrime Newsಪೊಲೀಸರ ಭರ್ಜರಿ ‌ಕಾರ್ಯಾಚರಣೆ: ಮೂರು ವರ್ಷಗಳಿಂದ ಬ್ಯಾಂಕ್ ಗೆ ಕನ್ನ ಹಾಕಿದ್ದ ಖದೀಮರ ಬಂಧನ!

ಪೊಲೀಸರ ಭರ್ಜರಿ ‌ಕಾರ್ಯಾಚರಣೆ: ಮೂರು ವರ್ಷಗಳಿಂದ ಬ್ಯಾಂಕ್ ಗೆ ಕನ್ನ ಹಾಕಿದ್ದ ಖದೀಮರ ಬಂಧನ!

For Dai;y Updates Join Our whatsapp Group

Spread the love

ಬೆಂಗಳೂರು ಗ್ರಾಮಾಂತರ: ಹೊಸಹಳ್ಳಿ ಪೊಲೀಸರ ಭರ್ಜರಿ ‌ಕಾರ್ಯಾಚರಣೆ ನಡೆಸಿ ಮೂರು ವರ್ಷಗಳಿಂದ ಬ್ಯಾಂಕ್ ಗೆ ಕನ್ನ ಹಾಕಿದ್ದ ಖದೀಮರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಮೂಲದ ನಾಲ್ವರು ಆರೋಪಿಗಳ‌ ಬಂಧನ ಮಾಡಲಾಗಿದ್ದು, ಸರ್ತಾಜ್, ಕಾಳಿ ಚರಣ್, ಗುಡ್ಡು ಅಲಿಯಾಸ್ ಕಳಿಯಾ, ಮತ್ತು ಅಸ್ಲಾಂ ಟನ್ ಟನ್ ಬಂಧಿತ ಆರೋಪಿಗಳಾಗಿದ್ದಾರೆ.

2022 ರಲ್ಲಿ ಬ್ಯಾಂಕ್ ಶೆಟರ್ ಮುರಿದು ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನ ಮಾಡಿದ್ದರು. ಆರೋಪಿಗಳು ಟ್ರಕ್ ನಲ್ಲಿ ಬೆಂಗಳೂರಿಗೆ ಬಾಡಿಗೆಗೆ ಬಂದಿದ್ದು ವಾಪಸ್ ಹೋಗುವ ವೇಳೆ ಬ್ಯಾಂಕ್ ಗೆ ಕನ್ನ ಹಾಕಿದ್ದರು. ರಾಜ್ಯ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆ ಇದೇ ರೀತಿ ಕೃತ್ಯಗಳನ್ನ ಮಾಡಿದ್ದರು.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಟ್ರಕ್ ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳ‌‌ ಜೊತೆ ಚಿನ್ನಾಭರಣ ರಿಕವರಿಗೆ ಪೊಲೀಸರು ಯುಪಿಗೆ ತೆರಳಿದ್ದಾರೆ. ಆರೋಪಿಗಳ ಬಂಧನದಿಂದ ಸ್ಥಳಿಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬ್ಯಾಂಕ್ ನಲ್ಲಿ ಅಂದು ಅಡವಿಟ್ಟು ಕಳ್ಳತನವಾಗಿದ್ದ ಚಿನ್ನ ವಾಪಸ್ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!