HomeUncategorizedಅಮಿತ್ ಶಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

ಅಮಿತ್ ಶಾರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಸೀಲ್ದಾರ್ ವಿಠ್ಠಲ್ ಚೌಗಲ್ ಅವರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ನಗರದ ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಪ್ರತಿಭಟನಾ ಮೆರವಣಿಗೆಯ ಮೂಲಕ ಬಸವೇಶ್ವರ ವೃತ್ತಕ್ಕೆ ತೆರಳಿ ಕೋರೆಗಾಂವ್ ವಿಜಯೋತ್ಸವದ ಘೋಷಣೆ ಕೂಗಿದರು.

ಅಮಿತ್ ಶಾರನ್ನು ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲೇ ಉಳಿಸಿಕೊಂಡಿರುವುದು ಅವರ ಧೋರಣೆ ಏನು ಎಂಬುದರ ಸೂಚಕವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಎಂದೆAದಿಗೂ ಡಾ.ಅಂಬೇಡ್ಕರ್ ಮತ್ತು ಸಂವಿಧಾನದ ವಿರೋಧ ಮಾಡುತ್ತಲೇ ಬಂದಿವೆ. ಅಮಿತ್ ಶಾ ಅಂಬೇಡ್ಕರರನ್ನು ಅವಹೇಳನ ಮಾಡಿದ್ದರ ಹಿಂದೆ ಇರುವುದು, ಮಾನವತೆ, ಪ್ರಜಾತಂತ್ರ ನ್ಯಾಯದ ಕುರಿತು ಅವರ ಅಸಹನೆ. ಈ ಅಸಹನೆಯನ್ನು ವ್ಯಕ್ತಪಡಿಸಿದ ಅಮಿತ್ ಶಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಇದುವರೆಗೆ ಅಂತಹ ಕ್ರಮ ಆಗಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸಂಘಟನೆಗಳು ಗೃಹ ಸಚಿವ ಅಮಿತ್ ಶಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸುತ್ತದೆ ಎಂದು ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರಮುಖರಾದ ಹುಲುಗಪ್ಪ ಹ್ಯಾಟಿ, ಕೆ.ದುರ್ಗೇಶ್, ಯಮುನಾ ಚಳ್ಳೂರು, ಯಮನೂರು ಇಳಿಗನೂರು, ಕೌಸರ್ ಕೋಲ್ಕಾರ್, ಮಂಜುನಾಥ ಮಳ್ಳನವರ, ಶಿವಕುಮಾರ್ ನಡುವಿನಮನಿ, ಸುಭಾಷ್ ಹಕ್ಕಾಪುರ ಹನಕುಂಟಿ, ಸಂತೋಷ್ ಕಳಸಣ್ಣವರ, ವೆಂಕಟೇಶ ಮಳ್ಳನವರ, ಯಮನೂರಪ್ಪ ಬಡಹಳ್ಳಿ, ಯಮನೂರಪ್ಪ ದೇವರಮನಿ, ಪ್ರವೀಣ್ ನಡುವಿನಮನಿ, ಬಸವರಾಜ್ ಬಿಕನಹಳ್ಳಿ, ಗುಡದಪ್ಪ ಭಂಗಿ, ಬಸವರಾಜ್ ಪೂಜಾರ್ ನರೇಗಲ್, ಮಖಬೂಲ್ ರಾಯಚೂರು, ಬಂದೆ ನವಾಝ ಮನಿಯಾರ್, ಕೆ.ಬಿ. ಗೋನಾಳ, ಸಂಜಿವಪ್ಪ ಹೊಸಳ್ಳಿ, ತುಕಾರಾಮ್ ಪಾತ್ರೋಟಿ, ಮೌಲಾ ಹುಸೇನ್ ಹಣಗಿ, ನೂರ ಸಾಬ್ ಹೊಸಮನಿ, ಪಾನಿಶಾ ಮಕಾಂದಾರ್, ಶಮಶುದ್ದೀನ್ ಮಕಾಂದಾರ್, ಹನುಮಂತ ಹನುಮಸಾಗರ, ಮಹೆಬೂಬ್ ಅಲಿ, ಹುಸೇನ್ ಬಾಷಾ ತಹಸೀಲ್ದಾರ್, ರಾಜಪ್ಪ ಚೌಹಾಣ್, ಜಾಫರ್ ಕುರಿ, ಯೋಗೇಶ್ ಬಿಕನಹಳ್ಳಿ, ವೀರೇಶ್ ಲಕಮಾಪುರ್, ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಗಾಳೆಪ್ಪ ಮುಂಗೊಲಿ, ಗಾಳೆಪ್ಪ ಬಿಕನಹಳ್ಳಿ, ನಜೀರ್ ಅಹ್ಮದ್ ಅಧೂನಿ, ಶೋಭಾ ಯಮನೂರಪ್ಪ, ಸಜ್ಜಾದ ಸಾಬ್ ಕವಲೂರ ಪಲ್ಟನ್, ಮಲ್ಲಿಕಾರ್ಜುನ್ ಪೂಜಾರ್ ಮುಂತಾದವರು ಭಾಗವಹಿಸಿದ್ದರು.

ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಮಲ್ಲಿಕಾರ್ಜುನ್ ಹಲಗೇರಿ ಮುಂತಾದವರು ಮಾತನಾಡಿದರು. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮುದುಕಪ್ಪ ಹೊಸಮನಿ ಮನವಿ ಓದಿ ಅರ್ಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!