HomeGadag Newsಸಂಸ್ಕಾರ, ಶಿಕ್ಷಣದಿಂದ ಮಾನಸಿಕ ಶಾಂತಿ: ಶಂಕರಾನಂದ ಸ್ವಾಮಿಗಳು

ಸಂಸ್ಕಾರ, ಶಿಕ್ಷಣದಿಂದ ಮಾನಸಿಕ ಶಾಂತಿ: ಶಂಕರಾನಂದ ಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಾನವನ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಬಹು ಮುಖ್ಯವಾಗಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರ ಅವಶ್ಯವಾಗಿದೆ. ಪಾಲಕ ಸಮುದಾಯ ಶಿಕ್ಷಣ ಜೊತೆಗೆ ಸಂಸ್ಕಾರವನ್ನು ಕಲಿಸುವಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಂಸ್ಕಾರ, ಶಿಕ್ಷಣದ ಮೂಲಕ ಜೀವನದಲ್ಲಿ ಮಾನಸಿಕ ಶಾಂತಿ ಗಳಿಸಲು ಸಾಧ್ಯ ಎಂದು ಸದ್ಗುರು ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮಿಗಳು ಹೇಳಿದರು.

ನಗರದ ಶಹಪೂರ ಪೇಟೆಯ ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಹಾಗೂ ಶ್ರೀ ಕಟ್ಟಿ ಬಸವೇಶ್ವರ ದೇವಸ್ಥಾನ ಸಹಯೋಗದಲ್ಲಿ ಮಾ.16ರಿಂದ 30ರವರೆಗೆ ನಡೆಯಲಿರುವ ಶ್ರೀ ಮಹಾದಾಸೋಹಿ ಕಲಬುರಗಿ ಶರಣ ಬಸವೇಶ್ವರರ 47ನೇ ವರ್ಷದ ಪುರಾಣ ಪ್ರಾರಂಭೋತ್ಸವ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ಬದುಕಿನಲ್ಲಿ ಸತ್ಯ, ಪ್ರಾಮಾಣಿಕತೆ, ಧರ್ಮ, ನ್ಯಾಯ-ನೀತಿಗಳ ಮೌಲ್ಯಗಳು ಅವಶ್ಯಕವಾಗಿವೆ. ಈ ಮೌಲ್ಯಗಳನ್ನು ಸಂಸ್ಕಾದಿಂದ ಕಲಿಯಲು ಸಾಧ್ಯ. ಈ ನೈತಿಕ ಮೌಲ್ಯದಿಂದ ಸುಂದರ ಬದುಕು ಕಟ್ಟಿಕೊಂಡು ಮುಂದಿನ ಪಿಳಿಗೆಗೆ ದಾರಿದೀಪವಾಗಬಹುದು. ವಿಶ್ವಾದ್ಯಂತ ಅನೇಕ ದಾರ್ಶನಿಕರು, ಸಂತರು, ಶರಣರು ತಮ್ಮ ತಪಸ್ಸು ಶಕ್ತಿಯ ಮೂಲಕ ಇಂದಿಗೂ ಜೀವಂತವಾಗಿದ್ದಾರೆ, ಲೋಕ ಕಲ್ಯಾಣ ಕಾರ್ಯದಿಂದ ಸ್ಮರಣೀಯರಾಗಿದ್ದಾರೆ. ಪರಿವಾರದ ಹಿರಿಯ ತಲೆಮಾರಿನ ಹೆಸರುಗಳನ್ನು ಮರೆತ ನಮಗೆ ಸಾಧು, ಸಂತ ಮತ್ತು ಶರಣರ ಹೆಸರು ನಿರಂತರ ಸ್ಮರಣೆಯಲ್ಲಿದೆ ಎಂದರೆ ಅವರ ಜೀವಮಾನ ಸಾಧನೆಯೇ ಇದಕ್ಕೆ ಕಾರಣವಾಗಿದೆ ಎಂದರು.

ನಗರಸಭಾ ಸದಸ್ಯ ಚಂದ್ರಶೇಖರ ತಡಸದ ಸಾಂದರ್ಭಿಕವಾಗಿ ಮಾತನಾಡಿದರು.

ವೇ.ಮೂ. ಬಸಯ್ಯ ಶಾಸ್ತ್ರಿಗಳು ಹಿರೇಮಠ, ಜಗನ್ನಾಥ ಶಿಂದಗಿ, ಅಪ್ಪಣ್ಣ ಕುಡತಿನಿ, ನಿವೃತ್ತ ಉಪನ್ಯಾಸಕರಾದ ಅನಿಲ ವೈದ್ಯ, ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಅಧ್ಯಕ್ಷರಾದ ಮಲ್ಲಿಕಾರ್ಜುನ ರಂಗಪ್ಪ ಹೂಗಾರ, ಶಂಭುಲಿಂಗಪ್ಪ ವಿ.ಕಾರದಕಟ್ಟಿ, ಭೀಮರೆಡ್ಡಿ ಕಿಲಬನವರ, ಸಂತೋಷ ಕುಡತರಕರ, ನರಸಿಂಹ ಕುಡತರಕರ, ಈಶ್ವರಪ್ಪ ಗಡಾದ, ನಿರ್ಮಲಾ ಕರಸಿದ್ದಿಮಠ, ನಾಗಪ್ಪ ಗಡಾದ, ಮುತ್ತು ಕಾರದಕಟ್ಟಿ, ಶ್ರೀ ಮಹಾದಾಸೋಹಿ ಕಲಬುರಗಿ ಶರಣ ಬಸವೇಶ್ವರರ ಪುರಾಣ ಸಮಿತಿಯ ಅಧ್ಯಕ್ಷರು ಮತ್ತು ಕೋಶಾಧ್ಯಕ್ಷರಾದ ಮಾರುತಿ ಮದಗುಣಕಿ, ಉಪಾಧ್ಯಕ್ಷ ಶಿವನಗೌಡ ಆಡೂರ, ಕಿರಣ ಎಸ್.ಗಡಾದ, ಕಾರ್ಯದರ್ಶಿ ವೀರೇಂದ್ರ ಮಣ್ಣನವರ, ಕಾರ್ಯಕ್ರಮದ ಆಯೋಜಕರಾದ ಗಂಗಾಧರ ಅ.ಗಡಾದ, ಶಂಕರ ಈ.ಗಡಾದ ಮುಂತಾದವರಿದ್ದರು.

ಶ್ರೀ ಕಟ್ಟಿ ಬಸವೇಶ್ವರ ಸಮುದಾಯ ಭವನ ಟ್ರಸ್ಟ್ ಹಾಗೂ ಶ್ರೀ ಕಟ್ಟಿ ಬಸವೇಶ್ವರ ದೇವಸ್ಥಾನ ಸಹಯೋಗದಲ್ಲಿ ಶ್ರೀ ಮಹಾದಾಸೋಹಿ ಕಲಬುರಗಿ ಶರಣ ಬಸವೇಶ್ವರರ ಕಳೆದ 47 ವರ್ಷದಿಂದ ಪುರಾಣ ಪ್ರವಚನ ಧಾರ್ಮಿಕ ಕಾರ್ಯ ನಿರಂತರವಾಗಿ ನಡೆಯಲು ದಾನಿಗಳ ಸಹಕಾರ ಬಹು ಮುಖ್ಯವಾಗಿದ್ದು, ಅಂತಹ ಪುಣ್ಯಾತ್ಮರ ಸಹಕಾರ ಮತ್ತು ಪ್ರೋತ್ಸಾಹದಿಂದ ಬಹು ವರ್ಷಗಳಿಂದ ಪುರಾಣ ಪ್ರವಚನ ಯಶಸ್ವಿಯಾಗಿ ನಡೆಯುತ್ತಿರುವದು ಸಂತಸ ವಿಚಾರವಾಗಿದೆ. ಯುವ ಪೀಳಿಗೆ ಹಿರಿಯರು ಹಾಕಿರುವ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಮಹತ್ತರವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ.

– ಶ್ರೀ ಶಂಕರಾನಂದ ಸ್ವಾಮಿಗಳು.

ಸದ್ಗುರು ಮುಕ್ಕಣ್ಣೇಶ್ವರ ಮಠ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!