HomeKarnataka Newsಮುಡಾ, ವಾಲ್ಮೀಕಿ, ಕಾಲ್ತುಳಿತ, ಅಬಕಾರಿ.. ಇವೆಲ್ಲವೂ ಸರ್ಕಾರದ ಸರಣಿ ಹಗರಣಗಳು: ಸುನಿಲ್ ಕುಮಾರ್!

ಮುಡಾ, ವಾಲ್ಮೀಕಿ, ಕಾಲ್ತುಳಿತ, ಅಬಕಾರಿ.. ಇವೆಲ್ಲವೂ ಸರ್ಕಾರದ ಸರಣಿ ಹಗರಣಗಳು: ಸುನಿಲ್ ಕುಮಾರ್!

For Dai;y Updates Join Our whatsapp Group

Spread the love

ಬೆಂಗಳೂರು:- ಮುಡಾ, ವಾಲ್ಮೀಕಿ, ಕಾಲ್ತುಳಿತ, ಅಬಕಾರಿ.. ಇವೆಲ್ಲವೂ ಸರ್ಕಾರದ ಸರಣಿ ಹಗರಣಗಳು ಎಂದು ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ವಿಷಯದಲ್ಲಿ 10 ವರ್ಷಗಳ ತಪ್ಪು ದತ್ತಾಂಶವನ್ನು ರಾಜ್ಯದ ಜನರಿಗೆ ಹೇಳಿಕೊಂಡು ಬಂದಿದ್ದಕ್ಕಾಗಿ ಸಿಎಂ ಕ್ಷಮೆ ಕೇಳಿ ರಾಜೀನಾಮೆ ಕೊಡಬೇಕು ಎಂದರು. ಸರಣಿ ವೈಫಲ್ಯ ಕಂಡವರು ನೀವು. 165 ಕೋಟಿ ರೂ. ದುರುಪಯೋಗವೂ ಆಗಿದೆ. ಮುಡಾ ಹಗರಣದ ವೈಫಲ್ಯ, ವಾಲ್ಮೀಕಿ ಹಗರಣ, ಕಾಲ್ತುಳಿತದ ಪ್ರಕರಣ, ಅಬಕಾರಿ ಹಗರಣ, ಈಗ ಈ ಜಾತಿಗಣತಿ. ಇವೆಲ್ಲವೂ ಸರಣಿ ವೈಫಲ್ಯಗಳು. ಆದ್ದರಿಂದ ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಇದೀಗ ರಾಜ್ಯದ ಹಿಂದಿನ ಜಾತಿ ಸಮೀಕ್ಷೆಯನ್ನು ಕೈಬಿಟ್ಟಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ 165 ಕೋಟಿ ರೂ. ಖರ್ಚು ಮಾಡಿದ್ದಕ್ಕೆ ಯಾರು ಹೊಣೆಗಾರರು? ಹಿಂದಿನ ಸರ್ವೇಗೆ ಮಾಡಿದ ಖರ್ಚಿಗೆ ಯಾರನ್ನು ಹೊಣೆ ಮಾಡುತ್ತೀರಿ? ಹೊಸ ಸಮೀಕ್ಷೆಗೆ ತಗಲುವ ವೆಚ್ಚಕ್ಕೆ ಯಾರನ್ನು ಜವಾಬ್ದಾರರನ್ನಾಗಿ ಮಾಡುತ್ತೀರಿ? ರಾಜ್ಯದ ತೆರಿಗೆ ಹಣವನ್ನು ನಿಮಗೆ ಬೇಕಾದಂತೆ ನೀರಿನಲ್ಲಿ ಹೋಮ ಮಾಡಲು ತಯಾರಿ ಮಾಡಿಕೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!