HomeGadag Newsಗಮನ ಸೆಳೆದ ನರೇಗಾ ಮಾಹಿತಿ ಮಳಿಗೆ

ಗಮನ ಸೆಳೆದ ನರೇಗಾ ಮಾಹಿತಿ ಮಳಿಗೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯಿಂದ ನಿರ್ಮಿಸಿದ ನರೇಗಾ ಮಾಹಿತಿ ಮಳಿಗೆ ಕಾರ್ಯಕ್ರಮಕ್ಕೆ ಆಗಮಿಸಿದ ಜನರ ಮೆಚ್ಚುಗೆಗೆ ಪಾತ್ರವಾಯಿತು.

ಜಿಲ್ಲಾ ಪಂಚಾಯತ ಗದಗ ಹಾಗೂ ತಾಲೂಕು ಪಂಚಾಯತ ರೋಣ ಅವರ ಸಹಯೋಗದೊಂದಿಗೆ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಯಡಿ ನಿರ್ಮಾಣ ಮಾಡಿದ ಮಳಿಗೆಯಲ್ಲಿ ಒಂದೇ ಸೂರಿನಡಿ ಜನರಿಗೆ ಹಾಗೂ ರೈತರಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಯಿತು.

ಮಾಹಿತಿ ಮಳಿಗೆಯಲ್ಲಿ ಜನರಿಗೆ ಹಾಗೂ ರೈತರಿಗೆ ನರೇಗಾ ಯೋಜನೆಯಡಿ ಕೃಷಿ ಚಟುವಟಿಕೆಗಳೊಂದಿಗೆ ಜಮೀನಿನ ಉತ್ಪಾದಕತೆಯನ್ನು ಹೆಚ್ಚಿಸಿ, ಅವರ ಕುಟುಂಬಕ್ಕೆ ಜೀವನೋಪಾಯದ ಮಾರ್ಗಗಳನ್ನು ಬಲಪಡಿಸಲು ಸಹಕಾರಿ ಆಗುವ ಕರಪತ್ರಗಳನ್ನು ಹಂಚಲಾಯಿತು. ವೈಯಕ್ತಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ದನದ ಕೊಟ್ಟಿಗೆ, ಬಚ್ಚಲು ಗುಂಡಿ, ಕೋಳಿ ಶೆಡ್, ಕುರಿಶೆಡ್, ಕೃಷಿ ಬಾವಿ, ಕೃಷಿ ಹೊಂಡ, ಅರಣ್ಯಿಕರಣ, ತೋಟಗಾರಿಕೆ ಸೇರಿದಂತೆ ವಿವಿಧ ಕಾಮಗಾರಿಗಳ ಅನುಷ್ಠಾನದ ಕುರಿತು ಜನರಿಗೆ ತಿಳಿಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!