ಯಾವ ವಿಷಯವಾಗಲಿ ಸುದ್ದಿಯಲ್ಲಿ ಸದ್ದುಗದ್ದಲ ಸೃಷ್ಟಿಸುವ ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ಪ್ರಮುಖ ವಿಚಾರಕ್ಕೆ ಗಮನ ಸೆಳೆದಿದ್ದಾರೆ. ಪರಭಾಷಾ ಚಿತ್ರರಂಗದಲ್ಲಿ ಫುಲ್ ಬ್ಯುಸಿ ಆಗಿರುವ ರಶ್ಮಿಕಾ—ತೆಲುಗು, ತಮಿಳು ಹಾಗೂ ಬಾಲಿವುಡ್‌ನಲ್ಲಿ ನ್ಯಾಷನಲ್ ಕ್ರಶ್‌ಗೆ ಡಿಮ್ಯಾಂಡ್ ದಿನೇ ದಿನೇ ಹೆಚ್ಚುತ್ತಿದೆ.
ಇತ್ತೀಚೆಗಷ್ಟೇ ‘ದಿ ಗರ್ಲ್ ಫ್ರೆಂಡ್’ ಸಿನಿಮಾ ರಿಲೀಸ್ ಆಗಿ ಭರ್ಜರಿ ಯಶಸ್ಸು ಕಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಅದರ ಮೊದಲು ‘ಪುಷ್ಪ’, ‘ಅನಿಮಲ್’ ಮತ್ತು ‘ಚಾವಾ’ ಮೊದಲಾದ ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿರುವ ರಶ್ಮಿಕಾ, ಇದೀಗ ಎಐ ತಂತ್ರಜ್ಞಾನದ ದುರುಪಯೋಗ ಕುರಿತು ಗಂಭೀರವಾದ ಚರ್ಚೆ ಮೂಡಿಸಿದ್ದಾರೆ.
ಎಐ ಪ್ರಗತಿಯ ಶಕ್ತಿ ಆದರೂ, ಕೆಲವರು ಇದನ್ನ ದುರುಪಯೋಗ ಪಡಿಸಿಕೊಂಡು ಮಹಿಳೆಯರ ವಿರುದ್ಧ ಕಟ್ಟುಕಥೆ ರಚನೆ, ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ರಶ್ಮಿಕಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ನಡೆತನ ಸಮಾಜದಲ್ಲಿ ಮಹಿಳೆಯರ ಗೌರವಕ್ಕೆ ಧಕ್ಕೆ ತರುತ್ತದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ರಶ್ಮಿಕಾ ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಹೇಳಿಕೊಂಡಿದ್ದು, ಅಭಿಮಾನಿಗಳೂ ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಶ್ಮಿಕಾ ತಮ್ಮ ಸಂದೇಶದಲ್ಲಿ, “ಎಐ ಅನ್ನು ದುರುಪಯೋಗ ಮಾಡಬೇಡಿ. ಜವಾಬ್ದಾರಿಯುತವಾಗಿ ಬಳಸಿ. ಮನುಷ್ಯರಂತೆ ವರ್ತಿಸಲು ಸಾಧ್ಯವಿಲ್ಲದವರಿಗೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಸಮಾಜವನ್ನು ಹೆಚ್ಚು ಘನತೆಮಯ ಮತ್ತು ಪ್ರಗತಿಪರವಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯೇ ಎಂದು ಅವರು ಮನವಿ ಮಾಡಿದ್ದಾರೆ.



