HomeTumakuruವಿ ಸೋಮಣ್ಣರ ಸೋಲಿಗೆ ಯಡಿಯೂರಪ್ಪ ಅಥವಾ ವಿಜಯೇಂದ್ರ ಕಾರಣರಲ್ಲ: ರೇಣುಕಾಚಾರ್ಯ

ವಿ ಸೋಮಣ್ಣರ ಸೋಲಿಗೆ ಯಡಿಯೂರಪ್ಪ ಅಥವಾ ವಿಜಯೇಂದ್ರ ಕಾರಣರಲ್ಲ: ರೇಣುಕಾಚಾರ್ಯ

For Dai;y Updates Join Our whatsapp Group

Spread the love

ತುಮಕೂರು: ವಿ ಸೋಮಣ್ಣರ ಸೋಲಿಗೆ ಹಾಗೂ ಪಕ್ಷದ ಸೋಲಿಗೆ ಯಡಿಯೂರಪ್ಪ ಆಗಲಿ ಅಥವಾ ವಿಜಯೇಂದ್ರ ಆಗಲಿ ಕಾರಣರಲ್ಲ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು. ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿ ಸೋಮಣ್ಣರ ಸೋಲಿಗೆ ಹಾಗೂ ಪಕ್ಷದ ಸೋಲಿಗೆ ಯಡಿಯೂರಪ್ಪ ಆಗಲಿ ಅಥವಾ ವಿಜಯೇಂದ್ರ ಆಗಲಿ ಕಾರಣರಲ್ಲ. ಯಡಿಯೂರಪ್ಪರನ್ನು ಕೆಳಗಿಳಿಸಿದ್ದು ಕಾರಣ. ಯತ್ನಾಳರ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದು ಖಂಡಿಸಿದರು.

ಸೋಮಣ್ಣರ ಸೋಲಿಗೆ ಯಾರೂ ಪ್ರಯತ್ನ ಪಟ್ಟಿಲ್ಲ. ಬದಲಾಗಿ ವಿಜಯೇಂದ್ರ ದೊಡ್ಡ ನಾಯಕನಾಗಿ ಬೆಳೆಯುತ್ತಾರೆ ಎಂದು ಅವರನ್ನು ಸೋಲಿಸಲು ಸ್ವಪಕ್ಷದವರೇ ಪ್ರಯತ್ನಪಟ್ಟಿದ್ದರು. ಮುಂದಿನ ದಿನದಲ್ಲಿ ಅವರ ಹೆಸರನ್ನು ಬಹಿರಂಗಪಡಿಸುತ್ತೇನೆ. ಗೋವಿಂದರಾಜ ನಗರದಲ್ಲಿ ಫಲಿತಾಂಶ ತದ್ವಿರುದ್ಧ ಆಗುತ್ತದೆ ಎಂದು ವಿ ಸೋಮಣ್ಣರಿಗೆ ಮೊದಲೇ ಗೊತ್ತಿತ್ತು. ಹಾಗಾಗಿ ಸಿಎಂ ಆಗುವ ಹಗಲುಕನಸು ಕಂಡು ಮೈಸೂರಿಗೆ ಶಿಫ್ಟ್ ಆದರು ಎಂದು ವಾಗ್ದಾಳಿ ನಡೆಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!