HomeGadag News`ನಮ್ಮ ಆತ್ಮರಕ್ಷಣೆ ನಮ್ಮ ಹೊಣೆ’

`ನಮ್ಮ ಆತ್ಮರಕ್ಷಣೆ ನಮ್ಮ ಹೊಣೆ’

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕ್ರಾಂತಿಸೇನಾ ಮಹಿಳಾ ಸಂಘಟನೆ, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳಿ, ಹಿಂದೂ ಜನ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಗದಗ ನಗರದಲ್ಲಿ ಪ್ರಥಮ ಬಾರಿಗೆ ಏಳು ದಿನಗಳ ಕಾಲ ಯುವತಿಯರು, ಮಹಿಳೆಯರಿಗಾಗಿ `ನಮ್ಮ ಆತ್ಮರಕ್ಷಣೆ ನಮ್ಮ ಹೊಣೆ’ ಎನ್ನುವ ಸಂಕಲ್ಪದೊಂದಿಗೆ ಮುಂಬೈ ನಿವಾಸಿ ಹರ್ಷತ್ ನಗರದ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಲಾಠಿ ಶೌರ್ಯ ಕಾರ್ಯಕ್ರಮ ಶಿಬಿರ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕ್ರಾಂತಿಸೇನಾ ಮಹಿಳಾ ಸಂಘಟನೆಯ ಅಧ್ಯಕ್ಷೆ ರಾಣಿ ಚಂದಾವರಿ, ಶ್ರೀ ರಾಜರಾಜೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಣುಕಾ ಕಬಾಡಿ, ಹಿಂದೂ ಜನ ಜಾಗೃತಿ ಸಮಿತಿಯ ಪ್ರಮುಖರು ಮಾತನಾಡಿ, ಮಹಿಳೆಯರು, ಯುವತಿಯರು ಸದೃಢರಾಗಬೇಕು, ಧೈರ್ಯವಂತರಾಗಬೇಕು. ಪ್ರತಿಯೊಂದು ವಿದ್ಯೆಯನ್ನು ಕಲಿತು ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ಸಂಕಲ್ಪದೊಂದಿಗೆ ಈ ಕಾರ್ಯಕ್ರಮವನ್ನು ಗದಗ ನಗರದ ತ್ರಿಕೂಟೇಶ್ವರ ದೇವಸ್ಥಾನದಲ್ಲಿ ಏಳು ದಿನಗಳ ಕಾಲ ನಡೆಸಿದ್ದೇವೆ ಎಂದು ಹೇಳಿದರು.

ಕ್ರಾಂತಿಸೇನಾ ಗದಗ ಜಿಲ್ಲಾಧ್ಯಕ್ಷ ಬಾಬು ಬಾಕಳೆ ಮಾತನಾಡಿ, ಗದಗ ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ ಈ ಕಾರ್ಯಕ್ರಮ ನಮಗೆ ಹೆಮ್ಮೆ ತಂದಿದೆ. ಹಿಂದೂ ಸಮಾಜದ ಯುವತಿಯರು ಬಹಳ ಜಾಗೃತೆಯಿಂದ ಇರಬೇಕು, ದಾಂಡಿಯ ನೃತ್ಯ ಆಡುವುದು ಕೇವಲ ಮನರಂಜನೆಗಾಗಿ. ಆದರೆ ಯುವತಿಯರು ಲಾಠಿ ಶೌರ್ಯ ಕಲಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರಾಂತಿಸೇನಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಬೀಬ್, ಪ್ರಭಾವತಿ ಗುತ್ತಿ, ಶಾಂತಾಬಾಯಿ ಬಾಕಳೆ, ಕೌಶಲ್ಯ ಬದಿ, ಅರುಣ ಗುಡ್ಡಗಟ್ಟಿ, ಗಾಯತ್ರಿ ಕಬಾಡಿ, ಭೀಮಾ ಕಾಟಿಗರ್, ಭರತ್ ಮಾರಿಯಪ್ಪನವರ, ಸಂಘಟನೆಗಳ ಸರ್ವ ಪದಾಧಿಕಾರಿಗಳು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!