ವಿಜಯಸಾಕ್ಷಿ ಸುದ್ದಿ, ಗದಗ : ಈ ಬಾರಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಜಿಲ್ಲೆಯವರೇ ಆದ ಆನಂದಸ್ವಾಮಿ ಗಡ್ಡದೇವರಮಠ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರನ್ನು ಆಶೀರ್ವಸಿ ಎಂದು ಸಚಿವ ಎಚ್.ಕೆ. ಪಾಟೀಲ ಮನವಿ ಮಾಡಿದರು.
ನಗರದ ಎಪಿಎಂಸಿ ಆವರಣದಲ್ಲಿನ ಬಸಪ್ಪ ಬಡ್ನಿಯವರ ಜಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪ್ರಚಾರಾರ್ಥವಾಗಿ ನಡೆದ ಪಂಚಮಸಾಲಿ ಸಮಾಜದವರ ಸಭೆಯಲ್ಲಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅನಿಲ ಪಾಟೀಲ ಮಾತನಾಡಿದರು. ಮುಖಂಡರಾದ ಬಾಲಚಂದ್ರ ಭರಮಗೌಡ್ರ, ಅಜ್ಜನಗೌಡ ಪಾಟೀಲ, ಸಿ.ಕೆ. ಮಾಳಶೆಟ್ಟಿ, ಎಸ್.ಪಿ. ಬಳಿಗಾರ, ಕಲ್ಲಣ್ಣ ಮನಗುಂಡಿ, ಚನ್ನಪ್ಪಣ್ಣ ಜಗಲಿ, ಹಾಲಪ್ಪ ಅಮರಗೋಳ, ಬಸವರಾಜ ದೇಸಾಯಿ, ನಾಗರಾಜ ಹೊಂಬಳಗಟ್ಟಿ, ಮಹಾದೇವಪ್ಪ, ರುದ್ರಮ್ಮ ಕೆರಕಲಮಟ್ಟಿ, ನೀಲಮ್ಮ ಬೋಳನವರ, ಮೀನಾಕ್ಷಿ ಬೆನಕಣ್ಣವರ, ಲಲಿತಾ ಗೊಳಗೊಳಕಿ, ಜಾನಕಿ ಮಲ್ಲಾಪೂರ, ದ್ರಾಕ್ಷಾಯಿಣಿ ಕರಿಬಿಷ್ಠಿ, ವಿ.ಕೆ. ಮಟ್ಟಿ. ಚನ್ನವೀರಪ್ಪ ಮಳಗಿ, ಬಾಲಚಂದ್ರ ಭರಮಗೌಡ, ಶರಣು ಗೊಳಗೊಳಕಿ ಸೇರಿ ಪಂಚಮಸಾಲಿ ಸಮಾಜದ ಮುಖಂಡರು ಹಾಜರಿದ್ದರು.



