ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಮತ್ತೆ ಜೋರಾಗಿವೆ. ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾವನ್ನು ನಿರ್ದೇಶಿಸಿರುವ ಹರೀಶ್ ಶಂಕರ್ ಮಾಡಿದ್ದ ಒಂದು ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.
ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಹರೀಶ್ ಶಂಕರ್ ‘ತಥಾಸ್ತು’ ಎಂದು ಬರೆದಿದ್ದರು. ಆ ಟ್ವೀಟ್‌ನಲ್ಲಿ ಮಹೇಶ್ ಬಾಬು ಸಿನಿಮಾಗಳ ದಾಖಲೆ ಮುರಿಯಬೇಕು ಎಂದು ಉಲ್ಲೇಖಿಸಿದ್ದರಿಂದ ಮಹೇಶ್ ಬಾಬು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.
ವಿವಾದ ಹೆಚ್ಚಾಗುತ್ತಿದ್ದಂತೆ ಹರೀಶ್ ಶಂಕರ್ ತಮ್ಮ ಟ್ವೀಟ್ ಅಳಿಸಿ, ತಾವು ಟ್ವೀಟ್ ಅನ್ನು ಸಂಪೂರ್ಣವಾಗಿ ಓದದೆ ಪ್ರತಿಕ್ರಿಯೆ ನೀಡಿದ್ದಾಗಿ ತಿಳಿಸಿದ್ದಾರೆ. ಮಹೇಶ್ ಬಾಬು ಮೇಲೆ ಅಪಾರ ಗೌರವವಿದ್ದು, ತಮ್ಮ ಟ್ವೀಟ್‌ನಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಲಾಗಿದೆ.



