HomeGadag Newsಪಹಲ್ಗಾಮ್ ನಲ್ಲಿ ಹುತಾತ್ಮರಾದವರಿಗೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಕೆ

ಪಹಲ್ಗಾಮ್ ನಲ್ಲಿ ಹುತಾತ್ಮರಾದವರಿಗೆ ದೀಪ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಕೆ

For Dai;y Updates Join Our whatsapp Group

Spread the love

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನುಮಂತದೇವರ್ ದೇವಸ್ಥಾನದ ಹತ್ತಿರ ಜಮ್ಮ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಹಿಂದೂಗಳ ಮೇಲೆ ನಡೆದ ಅಮಾನವೀಯವಾಗಿ ದಾಳಿಯಲ್ಲಿ ಹುತಾತ್ಮರಾದ ಭಾರತೀಯರಿಗೆ ಹಾಗೂ ವಿದೇಶಿ ಪ್ರಜೆಗಳಿಗೆ ಪಟ್ಟಣದ ವಿವಿಧ ಹಿಂದೂ ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬುಧವಾರ ದೀಪ ಬೆಳಗಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕ ಅಧ್ಯಕ್ಷ ಬಸವರಾಜ ಅರಳಿ, ಶ್ರೀರಾಮಸೇನಾ ತಾಲೂಕ ಅಧ್ಯಕ್ಷ ಈರಣ್ಣ ಪೂಜಾರ, ಹಿಂದೂ ಮಹಾಸಭಾ ಗಣಪತಿ ಅಧ್ಯಕ್ಷ ಫಕ್ಕೀರೇಶ ಅಣ್ಣಿಗೇರಿ, ರವಿ ಪುರಾಣಿಕಮಠ ಮಾತನಾಡಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿ ಅತ್ಯಂತ ಹೇಯ ಮತ್ತು ಬರ್ಬರವಾಗಿದೆ. ಉಗ್ರರ ಈ ಹೇಡಿ ಕೃತ್ಯವನ್ನು ಪ್ರತಿಯೊಬ್ಬರೂ ಬಲವಾಗಿ ಖಂಡಿಸಬೇಕು, ಇಂತಹ ಹೇಯ ಕೃತ್ಯಕ್ಕೆ ಭಾರತ ಶೀಘ್ರ ತಕ್ಕ ಉತ್ತರ ನೀಡಲಿದೆ, ಭಾರತದಲ್ಲಿನ ಹಿಂದೂಗಳ ಮೇಲೆ ಆಕ್ರಮಣ ನಡೆಸಿದರೆ ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಿಲ್ಲ, ಅಮಾಯಕ ಹಿಂದೂಗಳ ಮಾರಣ ಹೋಮ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಬೇಕು, ಮಂಗಳವಾರದ ಕೃತ್ಯ ನಡೆಸಿದವರ ಮೇಲೆ ಯುದ್ದ ಮಾಡಿಯಾದರೂ ಸರಿ ಅವರನ್ನು ಸದೆ ಬಡಿಯುವ ಕಾರ್ಯವಾಗಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು. ಇನ್ನು ಮುಂದೆ ಭಯೋತ್ಪಾಕದರ ಮೇಲೆ ಯಾವುದೇ ಕರುಣೆ ಇಲ್ಲದೆ ಅವರನ್ನು ಮುಗಿಸುವ ತನಕ ಭಾರತ ವಿರಮಿಸುವಂತಿಲ್ಲ, ದಾಳಿಯಲ್ಲಿ ಹಿಂದೂಗಳೇ ಎನ್ನುವದನ್ನು ಖಚಿತ ಪಡಿಸಿಕೊಂಡು ಹತ್ಯೆ ಮಾಡಲಾಗಿದ್ದು ಈ ಹೇಯ ಕೃತ್ಯವನ್ನು ಸಮಸ್ತ ಹಿಂದೂ ಸಮಾಜ ಖಂಡಿಸುತ್ತದೆ, ಉಗ್ರರ ಗುಂಡಿಗೆ ಬಲಿಯಾದವರಿಗೆ ಸಮಸ್ತ ಹಿಂದೂ ಸಮಾಜದ ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತೇವೆ, ಅವರ ಕುಟುಂಬದ ದುಃಖದಲ್ಲಿ ಹಿಂದೂ ಸಮಾಜವು ಭಾಗಿಯಾಗಿದೆ, ಅವರಿಗೆ ಪರಮಾತ್ಮ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ನವೀನ ಕುಂಬಾರ, ಮಂಜುನಾಥ ಮುಳುಗುಂದ, ಹನುಮಂತ ರಾಮಗೇರಿ,ಪ್ರವೀಣ ಬನ್ನಿಕೊಪ್ಪ, ಜಗದೀಶ್ ಗೋಡಿ, ಪ್ರವೀಣ ಕುಂಬಾರ, ಬಸವರಾಜ ಹಳ್ಳಿಕೇರಿ, ಚಂದ್ರು ಕರ್ಜಕಣ್ಣವರ, ಗಣೇಶ ಕುಂಬಾರ, ಅಭಿಷೇಕ ಕ್ಯಾದಿಗೇರಿ,ಈರಣ್ಣ ಶೆಟ್ಟಿಕೇರಿ, ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!