ನವದೆಹಲಿ: ದೇಶದಲ್ಲಿ ಪ್ರೀಮಿಯಮ್ ಪೆಟ್ರೋಲ್ ದರವನ್ನು ಲೀಟರ್‌ಗೆ ₹2.30ರಷ್ಟು ಹೆಚ್ಚಳ ಮಾಡಲಾಗಿದೆ. ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಈ ಏರಿಕೆ ಆಗಿರಬಹುದು ಎಂದು ಅಂದಾಜಿಸಲಾಗುತ್ತಿದೆ.
ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿಎಲ್, ಬಿಪಿಸಿಎಲ್ ಹಾಗೂ ಎಚ್ಪಿಸಿಎಲ್ ಈ ದರ ಪರಿಷ್ಕರಣೆ ಮಾಡಿವೆ. ಆದರೆ ಸಾಮಾನ್ಯ ಪೆಟ್ರೋಲ್ ಹಾಗೂ ಡೀಸಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಹೈ ಆಕ್ಟೇನ್ ಗುಣಮಟ್ಟ ಹೊಂದಿರುವ ಪ್ರೀಮಿಯಮ್ ಪೆಟ್ರೋಲ್ ಎಂಜಿನ್ ಕಾರ್ಯಕ್ಷಮತೆ ಹೆಚ್ಚಿಸುವುದರಿಂದಾಗಿ ಸಾಮಾನ್ಯ ಪೆಟ್ರೋಲಿಗಿಂತ ಹೆಚ್ಚಿನ ದರದಲ್ಲಿರುತ್ತದೆ.
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಸಾಮಾನ್ಯ ಪೆಟ್ರೋಲ್ ದರ ಸ್ಥಿರವಾಗಿದ್ದು, ಪ್ರೀಮಿಯಮ್ ಪೆಟ್ರೋಲ್ ಮಾತ್ರ ₹2.09ರಿಂದ ₹2.35ರವರೆಗೆ ಏರಿಕೆ ಕಂಡಿದೆ.



