HomeKarnataka NewsRain News: ಕರ್ನಾಟಕದ ಕರಾವಳಿ ಭಾಗದಲ್ಲಿ ಜೂನ್‌ 26ರ ವರೆಗೂ ಭಾರೀ ಮಳೆ!

Rain News: ಕರ್ನಾಟಕದ ಕರಾವಳಿ ಭಾಗದಲ್ಲಿ ಜೂನ್‌ 26ರ ವರೆಗೂ ಭಾರೀ ಮಳೆ!

For Dai;y Updates Join Our whatsapp Group

Spread the love

ಬೆಂಗಳೂರು:- ಜೂನ್‌ 26ರ ವರೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗಲಿದ್ದು, ಉಳಿದೆಲ್ಲಾ ಕಡೆ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದ್ದು, ಜೂನ್ 26ರ ವರೆಗೂ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಇನ್ನುಳಿದಂತೆ ವಿಜಯನಗರ, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಒಣಹವೆ ಇರಲಿದೆ. ಉಪ್ಪಿನಂಗಡಿ, ಗೇರುಸೊಪ್ಪ, ಮಂಕಿ, ಯಲ್ಲಾಪುರ, ಆಗುಂಬೆ, ಕೊಟ್ಟಿಗೆಹಾರ, ಕಮ್ಮರಡಿ, ಭಾಗಮಂಡಲ, ಹುಂಚದಕಟ್ಟೆ, ಶಿರಾಲಿ, ಕದ್ರಾ, ಸುಳ್ಯ, ಕುಮಟಾ, ಧರ್ಮಸ್ಥಳ, ಬನವಾಸಿ, ಜೋಯ್ಡಾ, ಬೆಳ್ತಂಗಡಿ, ಹೊನ್ನಾವರ, ತ್ಯಾಗರ್ತಿ, ಖಾನಾಪುರ್, ಗುತ್ತಲ್, ಆನವಟ್ಟಿ, ಕಳಸ, ವಿರಾಜಪೇಟೆ, ಹೊಸಕೋಟೆ, ಅಂಕೋಲಾ, ಪುತ್ತೂರ್, ಮೂಡುಬಿದಿರೆ, ಬಂಟವಾಳ, ಸಿದ್ದಾಪುರ, ಮಾಣಿ, ಕಾರವಾರ, ಮುಂಡಗೋಡಿನಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!