ಧಾರವಾಡ:– ಇಲ್ಲಿ ಸುರಿದ ಧಾರಾಕಾರ ಗಾಳಿ-ಮಳೆಯಿಂದಾಗಿ ಆಂಜನೇಯ ದೇವಸ್ಥಾನದ ಮೇಲೆ ಮರವೊಂದು ಬಿದ್ದಿರುವ ಘಟನೆ ಧಾರವಾಡ ಹೊರವಲಯದ ಹೊಯ್ಸಳನಗರದಲ್ಲಿ ಜರುಗಿದೆ.
ಹನುಮಜಯಂತಿ ಮುನ್ನಾ ದಿನವೇ ಆಂಜನೇಯನ ದೇವಸ್ಥಾನದ ಮೇಲೆ ಮರ ಬಿದ್ದಿದೆ. ಆಂಜನೇಯನ ದೇವಸ್ಥಾನದ ಪಕ್ಕದಲ್ಲೇ ನಿಲ್ಲಿಸಿದ ಆಟೋ ಕೂಡ ಜಖಂ ಆಗಿದೆ. ಮಳೆ, ಗಾಳಿಗೆ ಬುಡ ಸಮೇತ ಮರ ಉರುಳಿ ಬಿದ್ದಿದೆ.
ನಾಳೆ ಈ ದೇವಸ್ಥಾನದಲ್ಲಿ ಹನುಮಜಯಂತಿ ಕಾರ್ಯಕ್ರಮ ನಡೆಯಬೇಕಿತ್ತು. ಹನುಮಜಯಂತಿ ಮುನ್ನಾ ದಿನವೇ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.



