HomeGadag Newsಲೋಕ ಕಲ್ಯಾಣಕ್ಕಾಗಿ ರಾಮನಾಥ ಶ್ರೀಗಳ ಜಲಾನುಷ್ಠಾನ

ಲೋಕ ಕಲ್ಯಾಣಕ್ಕಾಗಿ ರಾಮನಾಥ ಶ್ರೀಗಳ ಜಲಾನುಷ್ಠಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಇಲ್ಲಿಯ ಸಮೀಪದ ಹರ್ಲಾಪೂರ ಗ್ರಾಮದ ಗೆಜ್ಜೆ ಸಿದ್ದೇಶ್ವರ ಮಠದ ಶಿವಯೋಗಿ ಅವಧೂತ ರಾಮನಾಥ ಸ್ವಾಮಿಗಳು ಮಂಗಳವಾರದಿಂದ 5 ದಿನಗಳವರೆಗೆ ಜಲಾನುಷ್ಠಾನ ಕೈಗೊಂಡಿದ್ದಾರೆ.

ಲೋಕ ಕಲ್ಯಾಣರ್ಥವಾಗಿ ಆರಂಭಿಸಿರುವ ಈ ಅನುಷ್ಠಾನವನ್ನು ಮಠದ ಆವರಣದಲ್ಲಿ ಡೋಣಿಯನ್ನು ನಿರ್ಮಿಸಿ ಅದರಲ್ಲಿ ನೀರನ್ನು ತುಂಬಿಸಿ ಪದ್ಮಾಸನದಲ್ಲಿ ಕೈಗೊಂಡಿದ್ದಾರೆ.

ಮುಂಜಾನೆ 11.15ಕ್ಕೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಈ ಅನುಷ್ಠಾನವನ್ನು ಆರಂಭಿಸಿದರು.

ಈ ಸಂದರ್ಭದಲ್ಲಿ ಗಣೀಶ ಮುತ್ಯಾ ಅನ್ವರಿ, ಮೌನೇಶ ಮುತ್ಯಾ ಇಳಕಲ್ಲ, ಹರೀಶ ಮುತ್ಯಾ ಹುಬ್ಬಳ್ಳಿ, ಕಾಶಿನಾಕುಂಟಾದ ಸುಸಾಮತ ಮಹಾರಾಜರು, ಪ್ರಭುಸ್ವಾಮಿ ಹಿರೇಮಠ ಹರ್ಲಾಪೂರ ಇವರ ಸಮ್ಮಖದಲ್ಲಿ ಅನುಷ್ಠಾನದಲ್ಲಿ ತೊಡಗಿಕೊಂಡಿದ್ದಾರೆ. ಆಗಸ್ಟ್ ೩ರಂದು ಮುಂಜಾನೆ 11.15ರಂದು ಅನುಷ್ಠಾನ ಮುಕ್ತಾಯಗೊಳ್ಳಲಿದ್ದು, ಗದಗ ಜಿಲ್ಲೆಯ ಹಲವು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!