ಬೆಂಗಳೂರು: ಡಿ.ಜೆ ಹಳ್ಳಿ ಇನ್ಸ್ಪೆಕ್ಟರ್ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಡಿಜೆ ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ರಿಜಿಸ್ಟರ್ ಸುನಿಲ್ ಅವರು ರಿಜಿಸ್ಟರ್ ಮದುವೆಯಾಗುವುದಾಗಿ ನಂಬಿಸಿದ್ದು, 1 ವರ್ಷದಲ್ಲಿ 3 ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಮದುವೆಯಾಗ್ತೀನಿ ಎಂದು ಇನ್ಸ್ಪೆಕ್ಟರ್ ಆಗಾಗ ನನ್ನನ್ನು 8ನೇ ಮೈಲಿಯಲ್ಲಿರುವ ತಮ್ಮ ಮನೆ ಹಾಗೂ ಹೋಟೆಲ್ ರೂಮ್ಗೆ ಕರೆಸಿಕೊಳ್ತಿದ್ದರು. ಅನೇಕ ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಖಾಸಗಿ ಫೋಟೋ ಹಾಗೂ ವಿಡಿಯೋ ಇಟ್ಟುಕೊಂಡು ವಂಚಿಸುತ್ತಿದ್ದರು ಎಂದು ಮಹಿಳೆ ದೂರಿದ್ದಾರೆ.
ನಮ್ಮ ವಿಚಾರ ಯಾರಿಗಾದ್ರು ಹೇಳಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕುತ್ತಿದ್ರು ಎಂದಿದ್ದಾರೆ. ಪ್ರತಿ ಬಾರಿ ವಿಡಿಯೋ ಕಾಲ್ ಮಾಡು ಎಂದು ಇನ್ಸ್ಪೆಕ್ಟರ್ ಸುನೀಲ್ ಪೀಡಿಸುತ್ತಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. ಸದ್ಯ ವಂಚನೆಗೊಳಗಾದ ಸಂತ್ರಸ್ತ ಮಹಿಳೆ ಡಿಜಿ/ ಐಜಿಪಿಗೆ ದೂರು ನೀಡಿದ್ದಾರೆ. ಸೂಕ್ತ ನ್ಯಾಯ ಕೊಡಿಸಿ ಎಂದು ಡಿಜಿ ಬಳಿ ಸಂತ್ರಸ್ತೆ ಮನವಿ ಮಾಡಿದ್ದಾರೆ.



