HomeGadag Newsಹೆಣ್ಣುಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ

ಹೆಣ್ಣುಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನವಾದ ಅವಕಾಶವನ್ನು ಮೊದಲು ನೀಡಿದವರು ಬಸವಾದಿ ಶರಣರು. ಗಂಡು ಹೆಣ್ಣು ಬೇಧವಿಲ್ಲದೆ ವರ್ಣಬೇಧ, ವರ್ಗಬೇಧ ಮಾಡದೇ ಹೆಣ್ಣುಮಕ್ಕಳಿಗೂ ವಿದ್ಯೆ, ಸಂಸ್ಕಾರ ಕಲ್ಪಿಸಿಕೊಟ್ಟವರು ಶರಣರು. ಮಹಿಳೆಯರಲ್ಲಿ ಒಂದು ವಿಶಿಷ್ಠ ಶಕ್ತಿಯಿದೆ, ಸಾವರ್ಥ್ಯವಿದೆ ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2737ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹೆಣ್ಣುಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಬೇಕು, ಬೆಳೆಸಬೇಕು, ಪ್ರೋತ್ಸಾಹಿಸಬೇಕು. ಸರಿಯಾದ ವಿದ್ಯೆ, ಸಂಸ್ಕಾರ ಕೊಟ್ಟರೆ ಭೂಮಿ ಮತ್ತು ಅಂತರಿಕ್ಷದಲ್ಲಿಯೂ ಸಾಧನೆ ಮಾಡಬಹುದು ಎಂಬುದಕ್ಕೆ ಸುನೀತಾ ವಿಲಿಯಮ್ಸ್ ಉದಾಹರಣೆಯಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಸ್ಪರ್ಧಿಸುತ್ತಿದ್ದಾರೆ. ಮಹಿಳೆಯರಿಗೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಹೆಣ್ಣುಮಕ್ಕಳಿಗೆ ವಿದ್ಯೆ ಕೊಡಬೇಕು. ಸಂಸ್ಕಾರ ನೀಡಬೇಕು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಸುವರ್ಣ ಹೊಸಂಗಡಿ ಉಪಸ್ಥಿತರಿದ್ದರು. ಮಂಜುಳಾ ಬುಳ್ಳಾ ಮಾರ್ಗದರ್ಶನದಲ್ಲಿ ಜೆ.ಸಿ. ಪ್ರೌಢಶಾಲೆಯ ಮಕ್ಕಳಿಂದ ಆಕರ್ಷಕ ಯೋಗ ಪ್ರದರ್ಶನ ನಡೆಯಿತು. ವಚನ ಸಂಗೀತವನ್ನು ಕುಮಾರಸ್ವಾಮಿ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ಪುಷ್ಪ ಭಂಡಾರಿ, ವಚನ ಚಿಂತನವನ್ನು ಜಯಶ್ರೀ ಹಳ್ಳಿಕೇರಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಸುಗಲಾ ಹಿರೇಮಠ ಹಾಗೂ ಉಮಾ ಕವಳಿಕಾಯಿ ವಹಿಸಿಕೊಂಡಿದ್ದರು. ಅಕ್ಕಮಹಾದೇವಿ ಯೋಗ ಕೇಂದ್ರದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

ಅಕ್ಕಮಹಾದೇವಿ ಯೋಗ ಕೇಂದ್ರದ ಅಧ್ಯಕ್ಷರಾದ ಸುವರ್ಣ ಹೊಸಂಗಡಿ ಸ್ವಾಗತಿಸಿದರು.ಶ್ರೀದೇವಿ ಶೆಟ್ಟರ ಪರಿಚಯಿಸಿದರೆ, ಅಕ್ಕಮಹಾದೇವಿ ಚಟ್ಟಿ ಅಭಿನಂದನಾ ಪತ್ರ ಓದಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಉಪನ್ಯಾಸಕರಾಗಿ ಆಗಮಿಸಿದ ಧಾರವಾಡದ ಸಾಹಿತಿಗಳಾದ ಡಾ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಮಠಗಳು ಸಂಸ್ಕೃತಿಯ ಸಂಕೇತಗಳು. ಶಿಸ್ತಿನ ನಿವಾಸಗಳು. ಅಕ್ಕಮಹಾದೇವಿ ಮೊದಲ ಮಹಿಳಾವಾದಿ ಚಿಂತಕಿ. ತನ್ನ ಯೋಗ್ಯತೆಯ ಅರಿವು ಇತ್ತು. ಅಂತೇಯೇ ಉತ್ತುಂಗಕ್ಕೆ ಏರಿದಳು. ದೇವರು ಎಲ್ಲಾ ಕಡೆ ಇರಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರನ್ನು ಹುಟ್ಟಿಸಿದರು. ಸ್ವಾತಂತ್ರವೆಂದರೆ ಸಂತೋಷ. ಗಂಡನ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ‍್ಯ ಇರಬೇಕು. ಹೆಣ್ಣಿಗೆ ದೇವರು ಸಹನೆ, ತಾಳ್ಮೆಯನ್ನು ಕೊಟ್ಟಿದ್ದಾನೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!