HomeKarnataka Newsಚಿತ್ತಾಪುರದ ಪಥಸಂಚಲನಕ್ಕೆ ಅನುಮತಿ ನಿರಾಕರಣೆ: ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

ಚಿತ್ತಾಪುರದ ಪಥಸಂಚಲನಕ್ಕೆ ಅನುಮತಿ ನಿರಾಕರಣೆ: ಛಲವಾದಿ ನಾರಾಯಣಸ್ವಾಮಿ ಆಕ್ಷೇಪ

For Dai;y Updates Join Our whatsapp Group

Spread the love

ಬೆಂಗಳೂರು: ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನಕ್ಕೆ ಮತ್ತು ಬಂಟಿಂಗ್, ಬ್ಯಾನರ್ ಹಾಕಲು ಹಾಗೂ ಅನುಮತಿಗೆ ಸಂಬಂಧಿಸಿ ಸುಮಾರು 6 ಸಾವಿರ ಹಣ ಕಟ್ಟಿಸಿಕೊಂಡ ಬಳಿಕ ಅನುಮತಿ ನಿರಾಕರಿಸಿದ್ದು ಮತ್ತು ಬ್ಯಾನರ್, ಬಂಟಿಂಗ್ ತೆರವು ಮಾಡಿದ್ದು ಸರಿಯಲ್ಲ; ಇದು ಸ್ಥಳೀಯ ಆಡಳಿತದ ದುಂಡಾವರ್ತಿ ಕ್ರಮ ಮತ್ತು ಪ್ರಿಯಾಂಕ್ ಖರ್ಗೆಯವರ ದುರ್ನಡತೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗಳಿಗೆ ಉತ್ತರಿಸಿದರು. ಆರೆಸ್ಸೆಸ್ ಪಥ ಸಂಚಲನಕ್ಕೆ ಸಂಬಂಧಿಸಿ ಪಿಡಿಒ ಒಬ್ಬರ ಅಮಾನತಿನ ಕುರಿತು ಪ್ರಶ್ನಿಸಿದಾಗ, ಆರೆಸ್ಸೆಸ್ ಎಂಬುದು ಒಂದು ರಾಜಕೀಯ ಪಕ್ಷವಲ್ಲ, ಎಲ್ಲ ಸಾರ್ವಜನಿಕ ಸಂಘಟನೆಯಂತೆ ಆರೆಸ್ಸೆಸ್ ಒಂದು ಸಂಘಟನೆ. ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕೇಂದ್ರ ಸರಕಾರದ ಆದೇಶವೂ ಇದೆ ಎಂದು ನುಡಿದರು.

ಇಷ್ಟೆಲ್ಲ ಮಾತನಾಡುವ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಅವರೇ, ಎಐಸಿಸಿಯಲ್ಲಿ ಅಲೆಮಾರಿ ಸಮುದಾಯಗಳ ಒಂದು ಘಟಕ ಇದೆ. ಈ ಘಟಕಕ್ಕೆ ಕರ್ನಾಟಕದಿಂದ ಡಾ.ಎ.ಎಸ್. ಪ್ರಭಾಕರ್ ಅವರನ್ನು ರಾಷ್ಟ್ರೀಯ ಸಂಚಾಲಕ ಎಂದು ನೇಮಿಸಿದ್ದಾರೆ. ಇವರು ಹಂಪಿ ವಿವಿಯ ಪ್ರೊಫೆಸರ್. ನೀವು ಎಐಸಿಸಿ ಪದಾಧಿಕಾರಿಯನ್ನಾಗಿ ಅವರನ್ನು ನೇಮಿಸಿದ್ದೀರಿ. ಇದು ಕಾನೂನುಬಾಹಿರವೇ? ಅಥವಾ ಸಾಮಾಜಿಕ ಸಂಘಟನೆಯಲ್ಲಿ ಭಾಗಿ ಆಗುವುದು ತಪ್ಪೇ ಎಂದು ಕೇಳಿದರು. ಎಐಸಿಸಿ ಅಧ್ಯಕ್ಷರು ಇದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ಸಿನಲ್ಲಿ ಕೆಲಸ ಮಾಡಲು ಯಾರನ್ನಾದರೂ ನೇಮಿಸಬಹುದು; ಆದರೆ, ಸಂಘಟನೆಗಳಲ್ಲಿ ಕೆಲಸ ಮಾಡಬಾರದೆಂಬ ಯಾವ ನೀತಿ ಇದು ಎಂದು ಟೀಕಿಸಿದರು. ರಾಜ್ಯದಲ್ಲಿ ಆಗುವ ಅನಾಹುತಗಳನ್ನು ಮರೆಮಾಚಲು ಆರೆಸ್ಸೆಸ್ ವಿಚಾರ ತರುತ್ತಿದ್ದಾರೆ ಎಂದು ದೂರಿದರು. ಆರೆಸ್ಸೆಸ್ ವಿಚಾರ ಪ್ರಶ್ನೆ ಕೇಳಿದ ಕಾರಣಕ್ಕೆ ಈ ಉತ್ತರ ನೀಡುತ್ತಿರುವುದಾಗಿ ಹೇಳಿದರು. ಆರೆಸ್ಸೆಸ್ ದೇಶದ ಪರವಾಗಿ ಕೆಲಸ ಮಾಡುವ ಸಂಘಟನೆ. ದೇಶಭಕ್ತರ ಕೂಟ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!