HomeGadag Newsನವೀಕೃತ ರೈಲ್ವೆ ನಿಲ್ದಾಣಕ್ಕೆ ಲಿಂ. ಪುಟ್ಟರಾಜ ಗವಾಯಿಗಳವರ ಹೆಸರಿಡಿ

ನವೀಕೃತ ರೈಲ್ವೆ ನಿಲ್ದಾಣಕ್ಕೆ ಲಿಂ. ಪುಟ್ಟರಾಜ ಗವಾಯಿಗಳವರ ಹೆಸರಿಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನಲ್ಲಿ ನವೀಕೃತಗೊಂಡ ರೈಲ್ವೆ ನಿಲ್ದಾಣಕ್ಕೆ ಗದುಗಿನ ನಡೆದಾಡುವ ದೇವರು ಲಿಂ. ಶ್ರೀ ಗಾನಯೋಗಿ ಡಾ. ಪಂ. ಪುಟ್ಟರಾಜ ಗವಾಯಿಗಳವರ ಹೆಸರು ನಾಮಕರಣ ಮಾಡುವಂತೆ ಕರ್ನಾಟಕ ರಾಜ್ಯ ಶ್ರೀ ಡಾ. ಪಂ. ಪುಟ್ಟರಾಜ ರೈತ ಸಂಘದ ವತಿಯಿಂದ ಹಾಗೂ ಭಕ್ತರ ಪರವಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಪಿ. ಮುಳಗುಂದ ನೇತೃತ್ವದಲ್ಲಿ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಂ.ಪಿ. ಮುಳಗುಂದ ಮಾತನಾಡಿ ಅಂಧ, ಅನಾಥ ಲಕ್ಷಾಂತರ ಮಕ್ಕಳಿಗೆ ಆಶ್ರಯ ನೀಡಿ ಶಿಕ್ಷಣ ಮತ್ತು ಸಂಗೀತ ಶಿಕ್ಷಣ ನೀಡಿ, ಅನೇಕ ಕಲಾವಿದರಿಗೆ ಆಶ್ರಯ ನೀಡಿ ಪ್ರೋತ್ಸಾಹ ನೀಡಿದ ಪೂಜ್ಯರ ಹೆಸರನ್ನು ನವಿಕೃತಗೊಂಡ ರೈಲ್ವೆ ನಿಲ್ದಾಣಕ್ಕೆ ಇಡಬೇಕೆಂದು ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ತಾವು ಸ್ಪಂದಿಸಬೇಕು ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಸಿರಾಜ ಲಕ್ಕುಂಡಿ, ಗದಗ ಜಿಲ್ಲಾ ಕಾರ್ಯದರ್ಶಿ ಬಸವರಾಜ ಮುಧೋಳಮಠ, ಶಂಕರಗೌಡ್ರ ಪಾಟೀಲ, ವೆಂಕಟೇಶ ಜುಂಜಣಿ, ಶೇಖಪ್ಪ ಕಾತರಕಿ, ರೇಖಾ ಹುಲ್ಲೂರು, ಶಂಭುಲಿಂಗೇಶ ಗಾಣಿಗೇರ, ಆನಂದ ಹಂಚಿನಾಳ, ಶಂಭು ಅಂಗಡಿ, ಮನೋಹರ ಕರ್ಣಿ, ಪರವೀನ ನದಾಫ, ಮಾರಮ್ಮ ಹಾವೇರಿ, ಸರ್ಫರಾಜ, ಆದಿಲ್, ಮುತ್ತುರಾಜ, ಸೋಫಿಯಾ ನದಾಫ್ ಸೇರಿದಂತೆ ಪಂಡಿತ ಪುಟ್ಟರಾಜ ಗವಾಯಿಗಳು ಸದ್ಭಕ್ತರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!