ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಹಿಳೆಯನ್ನು ನಮ್ಮ ಧರ್ಮ, ಸಂಸ್ಕೃತಿಯಲ್ಲಿ ದೇವರೆಂದು ಪೂಜಿಸುತ್ತೇವೆ. ಪುರುಷ ದೇವರಿಗಿಂತ ಸ್ತ್ರಿ ದೇವತೆ ಶಕ್ತಿವಂತಳೆಂದೂ ಗುರುತಿಸಿದ್ದೇವೆ. ತಾಯಿಯಾಗಿ, ಸೋದರಿಯಾಗಿ, ಮಡದಿಯಾಗಿ ಮನುಕುಲವನ್ನು ಪೊರೆಯುವ ಆಕೆಯ ಶಕ್ತಿ ಸದಾ ಕಾಲ ಈ ಜಗತ್ತನ್ನು ಕಾಪಾಡುತ್ತದೆ. ಹೀಗಾಗಿಯೇ ಮಹಿಳೆಯರು ಜಗದ ಕಣ್ಣು ಎಂದು ಎಸ್‌ಡಿಎಂಸಿ ಅಧ್ಯಕ್ಷ ವಿ.ಡಿ. ಸಿದ್ದನಗೌಡರ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ-1ರಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಪುರುಷರ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆಂಬುದು ಅಷ್ಟೇ ಸತ್ಯ. 12ನೇ ಶತಮಾನದಲ್ಲಿ ಬಸವಣ್ಣನವರು ಮಹಿಳೆಗೆ ಸ್ವಾತಂತ್ರ್ಯ ಕೊಟ್ಟಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮಹಿಳೆಗೆ ಸಮಾನತೆಯ ಹಕ್ಕು ನೀಡುವ ಮೂಲಕ ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಮಹಿಳೆಯನ್ನು ಗೌರವಿಸಿ ಪೂಜಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಸಹ ಶಿಕ್ಷಕರಾದ ಎಂ.ಎಂ. ಮೇಗಲಮನಿ, ಎಂ.ಎಂ. ಕೊಪ್ಪಳ, ಕೆ.ಎಂ. ಹೆರಕಲ್, ಮಂಜುನಾಥ ಕಲ್ಯಾಣಮಠ, ಎಚ್.ಆರ್. ಭಜೆಂತ್ರಿ, ಎಸ್.ಎಚ್. ಉಪ್ಪಾರ, ಎಸ್.ವಿ. ಹಿರೇಮಠ, ವಿ.ಎಂ. ಕಂಠಿ, ಟಿ.ವೀಣಾ, ಎಸ್.ಡಿ. ಪಂಡಿತ, ನಂದಾ ಮಟ್ಟಿ, ಜ್ಯೋತಿ ಜಾಧವ, ಪವಿತ್ರಾ ಮಟ್ಟಿ, ರೇಣುಕಾ ಪರ್ವತಗೌಡರ, ಅಡುಗೆ ಸಿಬ್ಬಂದಿ ಸಂಕಮ್ಮಾ ಯಳವತ್ತಿ, ಮಾಬುಬ್ಬಿ ಹೊಸೂರ, ಲಕ್ಷ್ಮಿ ಬೆಂದ್ರೆ, ರೇಣುಕಾ ಬಗಾಡೆ ಇದ್ದರು.



