ಮಹಿಳೆಯರಿಗೆ ಗೌರವ ನೀಡುವ ಮನೋಭಾವ ಮನೆಮಟ್ಟದಿಂದಲೇ ಆರಂಭವಾಗಬೇಕು ಎಂದು ಪ್ಯಾನ್ ಇಂಡಿಯಾ ನಟ ಜೂ ಎನ್ಟಿಆರ್ ಹೇಳಿದ್ದಾರೆ.
ನಗರದ ಕಿಮ್ಸ್ ಆಸ್ಪತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರನ್ನು ಹೇಗೆ ನೋಡಬೇಕು ಎಂಬುದನ್ನು ಪದೇ ಪದೇ ನೆನಪು ಮಾಡಿಸಬೇಕಾದ ಪರಿಸ್ಥಿತಿ ಇರುವುದು ಬೇಸರದ ಸಂಗತಿ. ಮಹಿಳೆಯರು ಎಷ್ಟು ಮುಖ್ಯ ಎಂಬುದು ಸಹಜವಾಗಿ ಅರಿವಾಗಬೇಕು” ಎಂದರು.
ತಮ್ಮ ಇಬ್ಬರು ಪುತ್ರರು ಕೂಡ ಮಹಿಳೆಯರಿಗೆ ಗೌರವ ನೀಡುವ ವ್ಯಕ್ತಿಗಳಾಗಿಯೇ ಬೆಳೆಬೇಕು ಎಂದು ನಾನು ಖಾತ್ರಿಪಡಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ರಸ್ತೆ ಸುರಕ್ಷತೆ ಕುರಿತು ಮಾತನಾಡಿದ ಜೂ ಎನ್ಟಿಆರ್, ರಸ್ತೆ ಅಪಘಾತಗಳಿಂದ ತಮ್ಮ ಕುಟುಂಬ ದೊಡ್ಡ ನಷ್ಟ ಅನುಭವಿಸಿದೆ. ನಾನು, ನನ್ನ ದೊಡ್ಡ ಅಣ್ಣ ಹಾಗೂ ತಂದೆಯನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡಿದ್ದೇವೆ. ನಾನು ಕೂಡ ಒಮ್ಮೆ ಭಾರಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದೆ ಎಂದು ನೆನಪಿಸಿಕೊಂಡರು.
ಡ್ರೈವಿಂಗ್ ಮಾಡುವಾಗ ಕುಟುಂಬವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕು. ಜವಾಬ್ದಾರಿ ಎನ್ನುವುದು ಒಳಗಿನಿಂದಲೇ ಬರಬೇಕು ಎಂದು ಸಲಹೆ ನೀಡಿದರು.
ಅಭಿಮಾನಿಗಳ ಬಗ್ಗೆ ಮಾತನಾಡಿದ ಅವರು, “ನಿಮ್ಮ ಪ್ರೀತಿಯನ್ನು ಪಡೆಯಲು ನಾನು ಅದೃಷ್ಟಶಾಲಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಕೋಟಿ ಕೋಟಿ ಧನ್ಯವಾದಗಳು. ಮನೆಗೆ ಸುರಕ್ಷಿತವಾಗಿ ಹೋಗಿ, ನಮ್ಮ ಕುಟುಂಬದಲ್ಲಿ ನಡೆದ ದುರ್ಘಟನೆ ನಿಮ್ಮ ಮನೆಯಲ್ಲಿ ನಡೆಯಬಾರದು” ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು.



