ಶಿವಮೊಗ್ಗ:- ರಾತ್ರೋ ರಾತ್ರಿ ಚಡ್ಡಿ ಗ್ಯಾಂಗ್ ಒಂದು ಮಾರಕಾಸ್ತ್ರ ಹಿಡಿದು ಓಡಾಡಿರುವ ಘಟನೆ ನಗರದ ಹೊರವಲಯದ ಪುಟ್ಟಪ್ಪ ಕ್ಯಾಂಪ್ ಲೇಔಟ್ ನಲ್ಲಿ ಜರುಗಿದೆ.
ಚಡ್ಡಿ ಗ್ಯಾಂಗ್ ನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಐದಾರು ಮಂದಿ ಬಡಾವಣೆಯಲ್ಲಿ ಹಿಂದೆ ಮುಂದೆ ಓಡಾಡಿ ನಂತರ ಹೋಗಿದ್ದಾರೆ. ಬಂದಿರುವ ಜನರು ಚಡ್ಡಿ ಗ್ಯಾಂಗ್ ನವರೇ ಇರಬೇಕು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಗ್ಯಾಂಗ್, ನಗರದ ಹೊರವಲಯದ ಪ್ರದೇಶಗಳನ್ನೇ ಟಾರ್ಗೆಟ್ ಮಾಡುತ್ತಿದ್ದು, ಖಾಲಿ ಇರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನಮಾಡುತ್ತಾರೆ. ಸ್ಥಳಕ್ಕೆ ತುಂಗಾ ನಗರ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.



