HomeEntertainmentಸಲ್ಮಾನ್‌ ಖಾನ್‌ ಗೆ ಗಂಭೀರ ಕಾಯಿಲೆ: ಇದೇ ಕಾರಣಕ್ಕೆ ಮದುವೆಯಾಗಿಲ್ವಾ ಸ್ಟಾರ್‌ ನಟ?

ಸಲ್ಮಾನ್‌ ಖಾನ್‌ ಗೆ ಗಂಭೀರ ಕಾಯಿಲೆ: ಇದೇ ಕಾರಣಕ್ಕೆ ಮದುವೆಯಾಗಿಲ್ವಾ ಸ್ಟಾರ್‌ ನಟ?

For Dai;y Updates Join Our whatsapp Group

Spread the love

ಸೆಲೆಬ್ರಿಟಿಗಳು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಳ್ಳುವುದು ತೀರಾ ವಿರಳ. ಆದರೆ ಇತ್ತೀಚೆಗೆ ಕೆಲವರು ತಮಗಿರುವ ಖಾಯಿಲೆಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅಂತೆಯೇ ಇದೀಗ ಬಾಲಿವುಡ್‌ ಚಿತ್ರರಂಗದ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ತಮಗಿರುವ ಖಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ.

ನೆಟ್​ಫ್ಲಿಕ್ಸ್​​ನಲ್ಲಿ ಪ್ರಸಾರವಾಗುವ ‘ದಿ ಕಪಿಲ್ ಶರ್ಮಾ’ ಶೋಗೆ ಆಗಮಿಸಿದ್ದ ಸಲ್ಮಾನ್‌ ಖಾನ್‌ ಈ ವೇಳೆ ತಮಗಿರುವ ಕಾಯಿಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಈ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ. ಅಲ್ಲದೇ ಸಲ್ಮಾನ್‌ ಖಾನ್ ಮದುವೆಯಾಗದೇ ಹಾಗೆಯೇ ಉಳಿದಿರೋದಕ್ಕೆ ಇದೇ ಕಾರಣವಿರಬಹುದಾ ಎಂಬ ಚರ್ಚೆ ಶುರುವಾಗಿದೆ.

ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್‌ ನರಶೂಲೆ (Trigeminal Neuralgia) ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಸಲ್ಮಾನ್‌ ಖಾನ್‌ ಹೇಳಿಕೊಂಡಿದ್ದಾರೆ. ಅಲ್ಲದೇ ನನಗೆ ಮೆದುಳಿನಲ್ಲಿ ರಕ್ತನಾಳ ಸಮಸ್ಯೆ ಇದೆ. ಅದಕ್ಕಾಗಿಯೂ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಎವಿಎಮ್‌ ಸಮಸ್ಯೆ ಕೂಡ ಇದೆ. ನನ್ನ ಪಕ್ಕೆಲುಬುಗಳು ಮುರಿತವಾಗಿದೆ. ಆದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

ಜೊತೆಗೆ ಪತ್ನಿ ಮೂಡ್ ಹಾಳಾಯಿತು ಎಂದರೆ ವಿಚ್ಛೇದನ ಕೊಟ್ಟು ಅರ್ಧ ಆಸ್ತಿಯನ್ನು ತೆಗೆದುಕೊಂಡು ಹೋಗಿಬಿಡಬಹುದು. ನಾನು ಯುವಕನಾಗಿದ್ದರೆ ಹೆಚ್ಚು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲವನ್ನೂ ಮತ್ತೆ ಗಳಿಸಬಹುದಿತ್ತು. ಆದರೆ, ಈ ವಯಸ್ಸಲ್ಲಿ ಮತ್ತೆ ಮೊದಲಿನಿಂದ ಆರಂಭಿಸಬೇಕು ಎಂದರೆ ಅದು ಅಸಾಧ್ಯ’ ಎಂದಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!