ವಿಜಯಸಾಕ್ಷಿ ಸುದ್ದಿ, ಮುಳಗುಂದ: ಸ್ಥಳೀಯ ಅಂಜುಮನ್ ಎ ಇಸ್ಲಾಂ ಪ್ರಾಥಮಿಕ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ವರ್ಗದ ಶಿಕ್ಷಕರು ತಮಗೆ ನೀಡಿದ ವೈಜ್ಞಾನಿಕ ಮಾದರಿಗಳನ್ನು ಮನೆಯಲ್ಲಿ ನಿರ್ಮಿಸಿ, ಅದರ ಸಂಪೂರ್ಣ ವಿವರಣೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಅಧ್ಯಕ್ಷ ತಾಜುದ್ದೀನ ಕಿಂಡ್ರಿ, ಮಕ್ಕಳು ಇಂದು ತಯಾರಿಸಿದ ವಿವಿಧ ರೀತಿಯ ವಿಜ್ಞಾನ ಮಾದರಿಗಳಲ್ಲಿ ಮನುಷ್ಯ ದೇಹದ ರಚನೆ, ಗ್ರಹಗಳ ಪರಿಚಲನೆ, ನೈಸರ್ಗಿಕ ವಿಕೋಪ ಮತ್ತು ಪರಿಹಾರ, ನೀರಿನ ಮೂಲಕ ವಿದ್ಯುತ್ ಉತ್ಪಾದಿಸುವ ಬಗೆ ನೋಡಿ ವೈಜ್ಞಾನಿಕ ಜಗತ್ತೇ ಇಲ್ಲಿ ನಿರ್ಮಾಣವಾಗಿದೆ ಎಂಬಂತೆ ಭಾಸವಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎ.ಡಿ. ಮುಜಾವರ, ಕಾರ್ಯದರ್ಶಿ ಹೈದರಅಲಿ ಖವಾಸ, ಮುನ್ನಾ ಡಾಲಾಯತ, ದಾವಲಸಾಬ ಲಕ್ಮೇಶ್ವರ, ದಾವೂದ ಜಮಾಲ್ ಸೇರಿದಂತೆ ಪಾಲಕರು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಮಕ್ಕಳ ವಸ್ತುಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.



