ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಹಿರೇಹಂದಿಗೋಳ ಗ್ರಾಮದ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಆಯ್ಕೆಯಾದ ಮುತ್ತು ಹೂಗಾರರಿಗೆ ಗದುಗಿನ ಶ್ರೀ ಮೃತ್ಯುಂಜಯ ಸೇವಾ ಸಮಿತಿ ಬಳಗದವರಿಂದ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಸಾಹಿತಿ ಶಿವಶಂಕ್ರಪ್ಪ ಆರಟ್ಟಿ ಮಾತನಾಡಿ, ಮುತ್ತು ಹೂಗಾರ ಉತ್ತಮ ಸಂಘಟಕರಾಗಿದ್ದು, ಸಾಮಾಜಿಕವಾಗಿ, ಧಾರ್ಮಿಕವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಸಹಕಾರ ನೀಡುತ್ತ ಬಂದಿದ್ದಾರೆ. ಇಂತಹ ಕ್ರಿಯಾಶೀಲ ವ್ಯಕ್ತಿಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸೂಕ್ತ ಹಾಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಹಿರಿಯ ಸಾಹಿತಿ, ಗುರು ಮೃತ್ಯುಂಜಯ ಸೇವಾ ಸಮಿತಿ ಅಧ್ಯಕ್ಷ ಐ.ಕೆ. ಕಮ್ಮಾರ ಮಾತನಾಡಿ, ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಪ್ರೀತಿ ಇರುವ ವ್ಯಕ್ತಿ ಮುತ್ತು ಹೂಗಾರ, ಹಿರೇಹಂದಿಗೋಳ ಸರಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದು ಹೆಮ್ಮೆಯ ಸಂಗತಿಯಾಗಿದೆ. ಇವರ ಅವಧಿಯಲ್ಲಿ ಶಾಲೆ ಅಭಿವೃದ್ಧಿಯಾಗಲೆಂದು ಶುಭ ಹಾರೈಸಿದರು.
ಸಂಭಾಪುರದ ಹಿರಿಯರಾದ ರಾಯಪ್ಪ ನಾಗನೂರ, ಚಿಕ್ಕೋಪ್ಪದ ಶಿವಣ್ಣ ಒಡೆಯರ, ಸಾಹಿತಿ ಅಂದಾನೆಪ್ಪ ವಿಭೂತಿ, ಆರ್.ಸಿ. ಹಿರೇಮಠ, ಮುತ್ತು ಮುಂತಾದವರು ಉಪಸ್ಥಿತರಿದ್ದು ಶುಭ ಕೋರಿದರು. ದರ್ಶನ ಬಡಿಗಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



