HomeEntertainment‘ಮುಗಿಲ್ ಪೇಟೆ’ ಚಿತ್ರದ ನಿರ್ದೇಶಕ ಭರತ್ ಮೇಲೆ ಗುಂಡಿನ ದಾಳಿ: ನಟ ತಾಂಡವ್ ರಾಮ್ ಬಂಧನ

‘ಮುಗಿಲ್ ಪೇಟೆ’ ಚಿತ್ರದ ನಿರ್ದೇಶಕ ಭರತ್ ಮೇಲೆ ಗುಂಡಿನ ದಾಳಿ: ನಟ ತಾಂಡವ್ ರಾಮ್ ಬಂಧನ

For Dai;y Updates Join Our whatsapp Group

Spread the love

ಜೋಡಿಹಕ್ಕಿ ಸೀರಿಯಲ್ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ತಾಂಡವ್ರಾಮ್ನಿರ್ದೇಶಕನಿಗೆ ಗುಂಡು ಹಾರಿಸಿ ಕೊಲೆಗೆ ಯತ್ನ ಮಾಡಿದ್ದಾರೆ.  ಮುಗಿಲ್ ಪೇಟೆ ಸಿನಿಮಾ ನಿರ್ದೇಶಕ ಭರತ್‌‌ ಅವರ ಮೇಲೆ ನಟ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಚಂದ್ರಲೇಔಟನ್ ಘಟನೆ ಸಂಭವಿಸಿದೆ. ಲೈಸೆನ್ಸ್ ಗನ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಭರತ್ ನಿರ್ದೇಶನದ ಸಿನಿಮಾದಲ್ಲಿ ನಾಯಕನಾಗಿ ತಾಂಡವ್ ರಾಮ್ ನಟಿಸುತ್ತಿದ್ದರು. ಆದರೆ ಭರತ್ ಆ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡಿದ್ದ ತಾಂಡವ್ ರಾಮ್, ನಿರ್ದೇಶಕ ಭರತ್​ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಒಂದು ಸುತ್ತು ಗುಂಡು ಹಾರಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಭರತ್ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದು, ಆರೋಪಿ ತಾಂಡವ್ ರಾಮ್ ಅನ್ನು ಬಂಧಿಸಲಾಗಿದೆ.

‘ಮುಗಿಲ್ ಪೇಟೆ’ ಸಿನಿಮಾವನ್ನು ಭರತ್ ನಿರ್ದೇಶನ ಮಾಡಿದ್ದರು. ಇನ್ನು ತಾಂಡವ್ ರಾಮ್, ‘ಜೋಡಿಹಕ್ಕಿ’, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಕೆಎಂ ಚೈತನ್ಯ ಅವರ ‘ಅಬ್ಬಬ್ಬ’ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ತಾಂಡವ್ ರಾಮ್ ಅನ್ನು ಕೊಲೆ ಯತ್ನ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪರವಾನಗಿ ಹೊಂದಿದ್ದ ಅವರ ಬಂದೂಕನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಂಡವ್ ರಾಮ್ ನಾಯಕನಾಗಿ ನಟಿಸುತ್ತಿದ್ದ ‘ದೇವನಾಂಪ್ರಿಯ’ ಹೆಸರಿನ ಸಿನಿಮಾ ಸೆಟ್ಟೇರಿತ್ತು, ಸಿನಿಮಾ ಅನ್ನು ನಿರ್ದೇಶಕ ಭರತ್ ನಾವುಂಡ ನಿರ್ದೇಶನ ಮಾಡುತ್ತಿದ್ದರು. ಸಿನಿಮಾ ಪ್ರಾರಂಭ ಆಗಿ ಎರಡು ವರ್ಷಗಳಾಗಿತ್ತು. ಆದರೆ ಸಿನಿಮಾವನ್ನು ಭರತ್ ನಿಲ್ಲಿಸಿಬಿಟ್ಟಿದ್ದರಂತೆ. ಸಿನಿಮಾ ನಿರ್ದೇಶನಕ್ಕೆಂದು ಭರತ್​ಗೆ ಆರು ಲಕ್ಷ ರೂಪಾಯಿ ಹಣವನ್ನು ತಾಂಡವ್ ನೀಡಿದ್ದರು. ಅದನ್ನು ವಾಪಸ್ ಕೇಳಿದ್ದರು ತಾಂಡವ್, ನಿನ್ನೆ (ನವೆಂಬರ್ 18) ‘ದೇವನಾಂಪ್ರಿಯ’ ಸಿನಿಮಾದ ನಿರ್ಮಾಪಕ ಕುಮಾರಸ್ವಾಮಿ ಎಂಬುವರ ಚಂದ್ರಾಲೇಔಟ್​ನ ಕಚೇರಿಯಲ್ಲಿ ಭರತ್ ಅನ್ನು ಕರೆಸಿ ಮೀಟಿಂಗ್ ಮಾಡಲಾಗಿತ್ತು. ಈ ವೇಳೆ ತಾಂಡವ್, ನಿರ್ದೇಶಕ ಭರತ್ ಬಳಿ ಹಣ ವಾಪಸ್ ಕೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ತಾಂಡವ್ ಬೆದರಿಕೆ ಹಾಕಿದ್ದು ಇದೇ ವೇಳೆ ಗುಂಡು ಹಾರಿಸಿ ಹತ್ಯೆಗೂ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!