ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸೀತಾ ರಾಮ’ ಧಾರಾವಾಹಿ ಶೀಘ್ರವೇ ಪೂರ್ಣಗೊಳ್ಳಲಿದೆ. 460ಕ್ಕೂ ಅಧಿಕ ಎಪಿಸೋಡ್ಗಳು ಪ್ರಸಾರ ಕಂಡಿರುವ ಈ ಧಾರಾವಾಹಿಯ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೀತಾ ರಾಮ ಧಾರವಾಹಿ ಮುಗಿಯುತ್ತಿರುವ ಸುದ್ದಿ ಕೇಳಿ ನಟಿ ವೈಷ್ಣವಿ ಗೌಡ ಮತ್ತೆ ಯಾವ ಧಾರವಾಹಿಯಲ್ಲಿ ಕಾಣಿಸಿಕೊಳ್ತಾರೆ ಎಂಬ ಕ್ಯೂರಿಯಾಸಿಟಿ ಅವರ ಅಭಿಮಾನಿಗಳಲ್ಲಿ ಶುರುವಾಗಿದ್ದು ಇದೀಗ ಈ ಬಗ್ಗೆ ಹಿರಿಯ ನಟಿ ಚಿತ್ಕಲಾ ಬೀರಾದಾರ್ ಹಿಂಟ್ ಕೊಟ್ಟಿದ್ದಾರೆ.
‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಪೂಜಾ ಲೋಕೇಶ್ ಮೊದಲಾದವರು ನಟಿಸಿದ್ದಾರೆ. ಈ ಧಾರಾವಾಹಿಯ ಕೊನೆಯ ದಿನದ ಶೂಟ್ ಇತ್ತೀಚೆಗೆ ನಡೆದಿದ್ದು ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಮಾತ್ರವಲ್ಲ ತಂಡದವರಿಗೂ ಬೇಸರ ಇದೆ.
‘ಸೀತಾ ರಾಮ’ ಕಲಾವಿದರ ಜೊತೆಗಿನ ಫೋಟೋಗಳನ್ನು ನಟಿ ವೈಷ್ಣವಿ ಗೌಡ ಹಂಚಿಕೊಂಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ನಟಿ, ‘ಈ ಅಂತ್ಯವು ಉತ್ತಮವಾದದ್ದರ ಆರಂಭ ಮಾತ್ರ. ಇದು ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಧಾರಾವಾಹಿಗಳಲ್ಲಿ ಒಂದು. ಇದನ್ನು ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಆಗಿ ನನ್ನ ಪಾತ್ರ ಮುಗಿಸುತ್ತಿದ್ದೇನೆ. ಶೀಘ್ರದಲ್ಲೇ ಒಂದೊಳ್ಳೆಯ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ’ ಎಂದು ಬರೆದುಕೊಂಡಿದ್ದಾರೆ.
ಇದಕ್ಕೆ ಕಾಮೆಂಟ್ ಮಾಡಿರೋ ಚಿತ್ಕಲಾ ಅವರು, ‘ಹೌದು, ಹೌದು ನನಗೆ ಗೊತ್ತು’ ಎಂದಿದ್ದಾರೆ. ವೈಷ್ಣವಿ ಶೀಘ್ರವೇ ಹೊಸ ಧಾರಾವಾಹಿ ಘೋಷಣೆ ಮಾಡುತ್ತಾರಾ? ಇದು ಅಭಿಮಾನಿಗಳಿಗೆ ಮೂಡಿದ ಸದ್ಯದ ಪ್ರಶ್ನೆ. ಮುಂದಿನ ದಿನಗಳಲ್ಲಿ ವೈಷ್ಣವಿ ಗೌಡ ಅವರ ಸಂಪೂರ್ಣ ಗಮನ ಮದುವೆ ಮೇಲೆ ಇರಲಿದೆ. ಶೀಘ್ರವೇ ಅವರು ಅನುಕೂಲ್ ಮಿಶ್ರಾ ಅವರನ್ನು ವರಿಸಲಿದ್ದಾರೆ.



