HomeSports NewsWTC 2025 final: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗೆದ್ದ ದಕ್ಷಿಣ ಆಫ್ರಿಕಾ..! ಆಸೀಸ್'ಗೆ...

WTC 2025 final: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗೆದ್ದ ದಕ್ಷಿಣ ಆಫ್ರಿಕಾ..! ಆಸೀಸ್’ಗೆ ಭಾರೀ ಮುಖಭಂಗ

For Dai;y Updates Join Our whatsapp Group

Spread the love

ಲಾರ್ಡ್ಸ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾವನ್ನು ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಸ್ಟ್ರೇಲಿಯಾ ನೀಡಿದ್ದ 282 ರನ್ಗಳ ಗುರಿಯನ್ನು ಬೆನ್ನಟ್ಟಿದ ಹರಿಣ ಪಡೆ,

ಮೂರನೇ ದಿನದ ಅಂತ್ಯಕ್ಕೆ 2 ವಿಕೆಟ್ಗಳ ನಷ್ಟಕ್ಕೆ 213 ರನ್ ಗಳಿಸಿತ್ತು. 4ನೇ ದಿನ ಬವುಮಾ ಪಡೆಗೆ ಗೆಲ್ಲಲು ಕೇವಲ 69 ರನ್ಗಳ ಅಗತ್ಯವಿತ್ತು. ಆ ಮೊತ್ತವನ್ನು 83. 4 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ದಕ್ಷಿಣ ಆಫ್ರಿಕಾ 27 ವರ್ಷಗಳ ನಂತರ ಐಸಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.

ಆಸ್ಟ್ರೇಲಿಯಾ ನೀಡಿದ 282 ರನ್ಗಳ ಗುರಿ ಬೆನ್ನಟ್ಟಿದ ಆಫ್ರಿಕಾಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ರಯಾನ್ ರಿಕಲ್ಟನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲ್ಲು ಸಾಧ್ಯವಾಗದೆ ಕೇವಲ ಮೂರನೇ ಓವರ್ನಲ್ಲಿ ಪೆವಿಲಿಯನ್ಸೇರಿಕೊಂಡರು. ಇದಾದ ನಂತರ ಜೊತೆಯಾದ ಮಾರ್ಕ್ರಾಮ್ ಹಾಗೂ ವಿಯಾನ್ ಮುಲ್ಡರ್ ಅರ್ಧಶತಕದ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಹೊರತಂದರು.

ವಿಯಾನ್ ಮುಲ್ಡರ್ ಅವರ ಇನ್ನಿಂಗ್ಸ್ 27 ರನ್ ಗಳಿಗೆ ಅಂತ್ಯವಾಯಿತು. ಬಳಿಕ ಜತೆಯಾದ ಐಡೆನ್ ಮಾರ್ಕ್ರಾಮ್ ಹಾಗೂ ಟೆಂಬಾ ಬವುಮಾ ಶತಕದ ಪಾಲುದಾರಿಕೆಯನ್ನು ಮಾಡಿ ತಂಡವನ್ನು 200 ರನ್ಗಳ ಗಡಿ ದಾಟಿಸಿದಲ್ಲದೆ ಮೂರನೇ ದಿನದಾಟವನ್ನು ಅಜೇಯವಾಗಿ ಮುಗಿಸಿದ್ದರು.

ನಾಲ್ಕನೇ ದಿನದಾಟದಲ್ಲಿ ಇಬ್ಬರೇ ನಿಂತು ತಂಡವನ್ನು ಗೆಲುವಿನ ದಡ ಸೇರಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ನಾಯಕ ಬವುಮಾ ತಮ್ಮ ಸ್ಕೋರ್ಗೆ ಕೇವಲ 1 ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಟ್ರಿಸ್ಟಾನ್ ಸ್ಟಬ್ಸ್ ಕೂಡ 8 ರನ್ಗಳಿಗೆ ಸುಸ್ತಾದರು.

ಹಂತದಲ್ಲಿ ಆಸೀಸ್ ಪರ ಪಂದ್ಯ ವಾಲುತ್ತಿರುವಂತೆ ತೋರಿತು. ಆದರೆ ಮೂರನೇ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಐಡೆನ್ ಮಾರ್ಕ್ರಾಮ್ ನಾಲ್ಕನೇ ದಿನವೂ ಅದೇ ಜವಾಬ್ದಾರಿಯುತ ಬ್ಯಾಟಿಂಗ್ಮುಂದುವರೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!