HomeGadag Newsಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ: ಸಚಿವ ಎಚ್.ಕೆ. ಪಾಟೀಲ ಭರವಸೆ

ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ: ಸಚಿವ ಎಚ್.ಕೆ. ಪಾಟೀಲ ಭರವಸೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಒಳಮೀಸಲಾತಿ ವಿರೋಧೀಸುವ ಪರಿಶಿಷ್ಟ ಜಾತಿ ಸಮುದಾಯಗಳ ಧ್ವನಿಯಾಗಿ ವಿಧಾನಸೌಧದಲ್ಲಿ ಮಾತನಾಡುವೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಭರವಸೆ ನೀಡಿದರು.

ಗದಗ ನಗರದಲ್ಲಿ ಒಳಮೀಸಲಾತಿ ವಿರೋಧಿಸಿ ಪರಿಶಿಷ್ಟ ಜಾತಿಯ ಹಲವು ಸಮುದಾಯಗಳು ಶುಕ್ರವಾರ ಧರ್ಮಗುರುಗಳ ನೇತೃತ್ವದಲ್ಲಿ ಒಳಮೀಸಲಾತಿ ವಿರೋಧೀಸುವ ಪರಿಶಿಷ್ಟ ಜಾತಿ ಸಮುದಾಯಗಳ ರಾಜ್ಯ ಸಮಿತಿ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಕಾರಣಕ್ಕು ನಿಮಗೆ ಮೀಸಲಾತಿ ತಪ್ಪಬಾರದು. ಮೀಸಲಾತಿ ತಪ್ಪುವ ಪ್ರಶ್ನೆಯೇ ಇಲ್ಲ. ಅಂಬೇಡ್ಕರ್ ಬರೆದ ಸಂವಿಧಾನವನ್ನು ತಿದ್ದುವುದು, ತಗೆದು ಹಾಕಲು ನಮ್ಮ ದೇಶದಲ್ಲಿ ಯಾರಿಗೂ ಹಾಗೂ ಯಾವುದೇ ಸರ್ಕಾರಕ್ಕೂ ನಾವು ಬೀಡುವುದಿಲ್ಲ. ನಾನು ನಿಮ್ಮವನಾಗಿ ನಿಮ್ಮ ವಾದವನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು, ನಿಮ್ಮೊಂದಿಗೆ ಇರುತ್ತೇನೆ. ನಿವೃತ್ತ ನ್ಯಾ. ನಾಗಮೋಹನದಾಸ ಅವರೊಂದಿಗೆ ಚರ್ಚಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

ಪಾದಯಾತ್ರೆಯ ವೇಳೆ ಧರ್ಮಗುರುಗಳಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಲಿಂಗಸುಗೂರು, ಕುಮಾರ ಮಹಾರಾಜರು ಬಾಗಲಕೋಟ, ಸರ್ದಾರ ಸೇವಾಲಾಲ ಮಹಾರಾಜ ಚಿತ್ರದುರ್ಗ, ಮುರಾಹರಿ ಮಹಾರಾಜ ಗುಲ್ಬರ್ಗಾ ಹಾಗೂ ಶಿರಹಟ್ಟಿ ಶಾಸಕ ಚಂದ್ರು ಲಮಾಣಿ, ಸಮಾಜ ಮುಖಂಡ ರಾಘವೇಂದ್ರ ನಾಯಕ ಇವರುಗಳು ತಮ್ಮ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಹಾಗೂ ಒಳಮೀಸಲಾತಿಯ ಕುರಿತು ಹಕ್ಕೊತ್ತಾಯ ಮಾಡಿದರು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ ಹಲವು ಪ.ಜಾತಿಯ ಭಾದಿತ ಸಮುದಾಯದ ಜನರು, ರಸ್ತೆಯುದ್ದಕ್ಕೂ ಸರ್ಕಾರಕ್ಕೆ ಧಿಕ್ಕಾರ ಕೂಗುತ್ತಾ, ತಮ್ಮ ಸಮುದಾಯದ ಧ್ವಜವನ್ನು ಬಿತ್ತರಿಸುತ್ತಾ ಸಾಗಿದರು. ಕೆಲ ಸಮಯಗಳಕಾಲ ರಸ್ತೆ ಬ್ಲಾಕ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಈ ಪಾದಯಾತ್ರೆಯಲ್ಲಿ ಹಲವು ಸಮುದಾಯದ ಮುಖಂಡರು ಭಾಗಿಯಾಗಿ ಒಳಮೀಸಲಾತಿ ವಿರೋಧಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಧರ್ಮಗುರುಗಳಾದ ಶ್ರೀ ಶಿವಪ್ರಕಾಶ ಮಹಾರಾಜರು ಕೊಟ್ಟೂರು, ಶ್ರೀ ಮಹಾದೇವ ಮಹಾರಾಜ್ ಮಿಂಚನಾಳ, ಶ್ರೀ ಭಿಮಸಿಂಗ ಮಹಾರಾಜ್ ಇಂಟಗಿಯಾಳ, ಶ್ರೀ ತಿಪ್ಪೇಸ್ವಾಮಿ ಸುರಪುರ, ಶ್ರೀ ಶಿವಾನಂದ ಮಹಾರಾಜ್ ನಿಲಾನಗರ, ಶ್ರೀ ಗೋಸಾವಿ ಮಹಾರಾಜ ಕೊಪ್ಪಳ, ಪ್ರಮುಖರಾದ ಕೆ.ಸಿ. ನಭಾಪುರ, ನೀಲು ರಾಠೋಡ, ಪಾಂಡು ಚವ್ಹಾಣ, ಚಂದ್ರಕಾಂತ ಚವ್ಹಾಣ, ಪರಮೇಶ ನಾಯಕ, ಅನಿಲ ಕಾರಭಾರಿ, ಭರತ ನಾಯಕ, ಹನುಮಂತ ನಾಯಕ, ಆಂಜನೇಯ ಕಟಗಿ, ನಾಗರೆಡ್ಡಿ ನಿಡಗುಂದಿ, ಉದಯಕುಮಾರ, ಪ್ರಶಾಂತ ರಾಠೋಡ, ಉಮೇಶ ರಾಠೋಡ, ವಿಠ್ಠಲ ತೋಟದ, ಸುಭಾಷ ಗುಡಿಮನಿ, ಶ್ರೀನಿವಾಸ್ ಬೇವಿನಕಟ್ಟಿ, ಚಂದ್ರಾ ನಾಯಕ, ಅನಿಲ ಕಾರಭಾರಿ, ಐ.ಎಸ್. ಪೂಜಾರ, ದಯಾನಂದ ಪವಾರ್, ಪುಂಡಲೀಕ ಲಮಾಣಿ, ಶಿವಣ್ಣ ಲಮಾಣಿ, ಧನುರಾಮ ತಂಬೂರಿ, ತುಕಾರಾಮ ಲಮಾಣಿ, ಜಾನು ಲಮಾಣಿ, ಈರಣ್ಣ ಲಮಾಣಿ, ಭಿಮಸಿಂಗ ರಾಠೋಡ, ಆಂಜನೇಯ ಕಟಗಿ, ಮೋಹನ ಭಜಂತ್ರಿ, ಸೋಮು ಲಮಾಣಿ, ರಾಘವೇಂದ್ರ, ದೇವಪ್ಪ ಲಮಾಣಿ, ತಾವರೆಪ್ಪ ಲಮಾಣಿ, ಕುಬೇರಪ್ಪ ರಾಠೋಡ, ಸೋಮರೆಡ್ಡಿ, ಧನಸಿಂಗ ಲಮಾಣಿ, ಗೋಪಾಲ ಪೂಜಾರ, ಪರಶುರಾಮ ರಾಠೋಡ, ಪುರಪ್ಪ ನಾಯಕ, ನುರಪ್ಪ ನಾಯಕ, ಚಂದ್ರಾ ನಾಯಕ, ಟಿ.ಡಿ. ಪೂಜಾರ, ಸುರೇಶ್ ಮಹಾರಾಜ್, ಎಲ್.ಆರ್. ಚವ್ಹಾಣ, ಖಿಮಪ್ಪ ನಾಯಕ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!