ಮುಸ್ಲಿಂ ಗೂಂಡಾಗಳು ಎಂದು ಕರೆದಿದ್ದ ಶ್ರೀರಾಮಸೇನೆ ಮುಖಂಡ ರಾಜು ಖಾನಪ್ಪನವರ್
ವಿಜಯಸಾಕ್ಷಿ ಸುದ್ದಿ, ಗದಗ
ಪಿಎಸ್ಐ ಅವರ ವಿರುದ್ಧ ಶನಿವಾರ ಲಕ್ಷ್ಮೇಶ್ವರ ಪಟ್ಟಣ ಬಂದ್ ಕರೆ ನೀಡಿರುವ ಶ್ರೀರಾಮಸೇನೆಗೆ ಅವಕಾಶ ನೀಡದಂತೆ ಲಕ್ಷ್ಮೇಶ್ವರದ ಅಂಜುಮನ್ ಇಸ್ಲಾಂ ಕಮಿಟಿಯ ಪದಾಧಿಕಾರಿಗಳು ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ ಪಟ್ಟಣಕ್ಕೆ ಭೇಟಿ ನೀಡಿದ್ದ ಎಸ್ಪಿ ಬಿ.ಎಸ್. ನೇಮಗೌಡ ಅವರನ್ನು ಭೇಟಿ ಮಾಡಿದ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು, ಲಕ್ಷ್ಮೇಶ್ವರ ಪಿಎಸ್ಐ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರತಿಭಟನೆಗೆ ಮುಂದಾಗಿರುವ ಶ್ರೀರಾಮಸೇನೆ, ಸೋಶಿಯಲ್ ಮಿಡಿಯಾದಲ್ಲಿ ಮುಸ್ಲಿಂ ಗೂಂಡಾಗಳು ಎಂದು ಪೋಸ್ಟ್ ಹಾಕಿ, ಲಕ್ಷ್ಮೇಶ್ವರ ಬಂದ್ ಮಾಡಲು ಮುಂದಾಗಿದ್ದು ಪಟ್ಟಣದಲ್ಲಿ ಅಶಾಂತಿ ಮೂಡಿಸುವ ಉದ್ದೇಶವಿದೆ.
ಹಾಗಾಗಿ ಯಾವುದೇ ಕಾರಣಕ್ಕೂ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಗೆ ಅವಕಾಶ ನೀಡಬಾರದು. ಅಷ್ಟೇ ಅಲ್ಲದೇ ಪಿಎಸ್ಐ ಮೇಲೆ ಸುಳ್ಳು ಆರೋಪ ಹಾಗೂ ಮುಸ್ಲಿಂ ಗೂಂಡಾಗಳು ಎಂದು ಕರೆದಿರುವ ಶ್ರೀರಾಮಸೇನೆ ಮುಖಂಡರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಇದೆ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳಾದ ಮುಖ್ತಾರ್ ಅಹಮದ್ ಗದಗ, ಸುಲೇಮಾನ್ ಸಾಬ್ ಕಣಕೆ, ದಾದಾಪಿರ್ ಮುಚ್ಚಾಲೆ, ಕರೀಮ್ ಹಜರತ್ ಸುಬಾನ್ ಸಾಬ್ ಹೊಂಬಳ, ಫಿರ್ದೋಷ್ ಆಡೂರ, ಸಾಹೇಬ್ ಜಾನ್ ಹವಾಲ್ದಾರ್, ಮುಷ್ತಾಕ್ ಶಿರಹಟ್ಟಿ, ಇರ್ಫಾನ್ ಬೇಗ್ ದಾದಾಪೀರ್ ಡಾಲಯತ್, ಫಹಿಮ ಪಲ್ಲಿ ಮಿರ್ಜಾ, ಮಾಬುಸಾಬ್ ಮುಳಗುಂದ ಇದ್ದರು.



