ನೆಲಮಂಗಲ: ಹೇಳೋರಿಲ್ಲ ಕೋಳೋರಿಲ್ಲ, ರಾಜ್ಯ ಸರ್ಕಾರ ಸತ್ತ ಹೆಣದಂತಾಗಿದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರನ್ನು ಯಾರೊಂದಿಗೂ ಕಂಪೇರ್ ಮಾಡಲಾಗಲ್ಲ, ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿ ಅದರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ,
ಸತ್ಯಗಾಲದಿಂದ ನೀರು ತಂದು ಕೆರೆಗಳನ್ನು ತುಂಬಿಸಿದ್ದಾರೆ, ಜಮೀರ್ ಅಹ್ಮದ್ ಬಾಯಿಗೆ ಬಂದಂತೆ ಮಾತಾಡುತ್ತಾರೆ, ಹೇಳೋರಿಲ್ಲ ಕೋಳೋರಿಲ್ಲ, ರಾಜ್ಯ ಸರ್ಕಾರ ಸತ್ತ ಹೆಣದಂತಾಗಿದೆ ಎಂದು ಹೇಳಿದರು. ಇನ್ನೂ ಜಮೀರ್ ಅಹ್ಮದ್ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ, ಕುಮಾರಸ್ವಾಮಿ ಇಲ್ಲದಿದ್ದರೆ ಅವರು ಬಸ್ಸಿನ ವ್ಯವಹಾರ ನೋಡಿಕೊಂಡಿರಬೇಕಾಗುತಿತ್ತು, ಮಂತ್ರಿಯಾದವರಿಗೆ ಸಂಸ್ಕಾರ ಬೇಕು, ಜಮೀರ್ ಈ ಮಟ್ಟಕ್ಕೆ ಬೀಳುತ್ತಾರೆಂಬ ನಿರೀಕ್ಷೆ ಖಂಡಿತವಾಗಿಯೂ ತನಗಿರಲಿಲ್ಲ ಎಂದು ಸೋಮಣ್ಣ ಹೇಳಿದರು.



