HomeDharwadಅರ್ಹ ಫಲಾನುಭವಿಗಳಿಗೆ ಸಹಾಯಧನ

ಅರ್ಹ ಫಲಾನುಭವಿಗಳಿಗೆ ಸಹಾಯಧನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ: ಕಟ್ಟಡ ಕಾರ್ಮಿಕರ ಮಕ್ಕಳ ವಿವಾಹಕ್ಕೆ ದೊರೆಯುವ ಪ್ರೋತ್ಸಾಹಧನ 2024-25ನೇ ಸಾಲಿನಲ್ಲಿ ಮಂಜೂರಾಗಿರುವ 23,121 ಫಲಾನುಭವಿಗಳ ಪೈಕಿ 6,595 ಫಲಾನುಭವಿಗಳಿಗೆ ಸಹಾಯ ಧನದ ಮೊತ್ತವನ್ನು ಅವರ ಖಾತೆಗೆ ಡಿಬಿಟಿ ಮೂಲಕ ನೇರ ಜಮಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಕಾರ್ಮಿಕ ಸಚಿವರಾದ ಸಂತೋಷ ಲಾಡ್ ತಿಳಿಸಿದರು.

ಅವರು ಬುಧವಾರ ಬೆಳಿಗ್ಗೆ ವಿಧಾನ ಸಭೆಯ ಕಲಾಪದಲ್ಲಿ ಭಾಗವಹಿಸಿ, ಹುಬ್ಬಳ್ಳಿ-ಧಾರವಾಡ ಕೇಂದ್ರೀಯ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.

2022ರಿಂದ ಇಲ್ಲಿಯವರೆಗೆ ಮದುವೆ ಧನಸಹಾಯಕ್ಕಾಗಿ 2022-23ನೇ ಸಾಲಿನಲ್ಲಿ 66,514 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 48,366 ಅರ್ಜಿಗಳು ಮಂಜೂರಾಗಿವೆ. 2023-24ನೇ ಸಾಲಿನಲ್ಲಿ 50,398 ಅರ್ಜಿಗಳು ಸಲ್ಲಿಕೆಯಾಗಿದ್ದು, 34,604 ಅರ್ಜಿಗಳು ಮಂಜೂರಾಗಿವೆ. ಮತ್ತು 2024-25ನೇ ಸಾಲಿನಲ್ಲಿ 40,262 ಅರ್ಜಿಗಳು ಸಲ್ಲಿಕೆಯಾಗಿದ್ದು, 23,121 ಅರ್ಜಿಗಳು ಮಂಜೂರಾಗಿವೆ. ಒಟ್ಟಾರೆಯಾಗಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು ರಾಜ್ಯಾಂದತ್ಯ 1,57,174 ಅರ್ಜಿಗಳು ಮದುವೆ ಧನಸಹಾಯ ಬಯಸಿ ಸಲ್ಲಿಕೆಯಾಗಿದ್ದು, ಇವುಗಳ ಪೈಕಿ 1,06,091 ಅರ್ಜಿಗಳು ಮಂಜೂರಾಗಿವೆ. ಇದರಲ್ಲಿನ 6,317 ಅರ್ಜಿಗಳು ಪರಿಶೀಲನೆಗೆ ಹಾಗೂ ಮಂಜೂರಾತಿಗೆ ಬಾಕಿ ಇವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

6,595 ಫಲಾನುಭವಿಗಳಿಗೆ ಸಹಾಯಧನದ ಮೊತ್ತವನ್ನು ಪಾವತಿಸುವ ಪೂರ್ವದಲ್ಲಿ ಕಾರ್ಮಿಕ ಅಧಿಕಾರಿಗಳು ಡಿಬಿಟಿ ತಂತ್ರಾಂಶದ ಮೂಲಕ ಫಲಾನುಭವಿಗಳ ಆಧಾರ್ ವ್ಯಾಲಿಡೇಷನ್ ಹಾಗೂ ಇನ್ನಿತರ ಮಾನದಂಡಗಳ ಪ್ರಕ್ರಿಯೆ ಪೂರ್ಣಗೊಳಿಸಿ, ಅರ್ಹ ಫಲಾನುಭವಿಗಳಿಗೆ ಮಂಡಳಿಯಿಂದ ಸಹಾಯಧನವನ್ನು ಪಾವತಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 2023ರಿಂದ ಈ ಯೊಜನೆಯಡಿ ಒಟ್ಟು 1,081 ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 652 ಫಲಾನುಭವಿಗಳಿಗೆ ಸಹಾಯ ಧನವನ್ನು ಮಂಜೂರು ಮಾಡಿ, ಡಿಬಿಟಿ ಮುಖಾಂತರ ಫಲಾನುಭವಿಗಳಿಗೆ ಸಹಾಯಧನನ್ನು ವರ್ಗಾಯಿಸಲಾಗಿದೆ ಹಾಗೂ 46 ಅರ್ಜಿಗಳು ಪರಿಶೀಲನಾ ಹಂತದಲ್ಲಿವೆ ಎಂದು ಸಚಿವ ಸಂತೋಷ ಲಾಡ್ ಸದನದಲ್ಲಿ ತಿಳಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!