HomeIndia NewsSucide Case: ಪ್ರಿಯತಮೆಯ ಹಣದ ದಾಹಕ್ಕೆ ಸೂಸೈಡ್ ಮಾಡಿಕೊಂಡ ಉದ್ಯಮಿ!

Sucide Case: ಪ್ರಿಯತಮೆಯ ಹಣದ ದಾಹಕ್ಕೆ ಸೂಸೈಡ್ ಮಾಡಿಕೊಂಡ ಉದ್ಯಮಿ!

For Dai;y Updates Join Our whatsapp Group

Spread the love

ಲಕ್ನೋ: ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಜೀವದ ಮೋಸದಾಟಕ್ಕೆ ಬೇಸರಗೊಂಡು ಅದೆಷ್ಟೋ ಜನರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಅಂತಹದೇ ಘಟನೆಯೊಂದು ಇದೀಗ ನಡೆದಿದ್ದು, ದುಡ್ಡಿಗಾಗಿ ಪ್ರಿಯತಮೆ ಮಾಡುತ್ತಿದ್ದ ಬ್ಲಾಕ್‌ಮೇಲ್‌ಗೆ ಬೇಸತ್ತು ಉದ್ಯಮಿಯೊಬ್ಬರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ.

ಲಕ್ನೋದಲ್ಲಿ ಘಟನೆ ನಡೆದಿದ್ದು, ಇಲ್ಲಿನ ಉದ್ಯಮಿಯೊಬ್ಬರು ಗೆಳತಿಯ ಬ್ಲಾಕ್‌ಮೇಲ್‌ ಕಾಟಕ್ಕೆ ಬೇಸತ್ತು ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜುಲೈ 15 ರಂದು ಈ ಘಟನೆ ನಡೆದಿದ್ದು, ಉದ್ಯಮಿ ಮನೋಜ್‌ ಕುಮಾರ್‌ (34) ಸೈರ್‌ಪುರ ಪ್ರದೇಶದ ಹೋಟೆಲ್‌ ಒಂದರಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತದೇಹದ ಬಳಿ ಪೊಲೀಸರಿಗೆ ಪಿಸ್ತೂಲ್‌, ಕಾರ್ಟ್ರಿಡ್ಜ್‌ ಶೆಲ್‌ಗಳು ಮತ್ತು ಡೆತ್ ನೋಟ್‌ ಸಿಕ್ಕಿದ್ದು, ʼಆಕೆ ನನ್ನನ್ನು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿಸಿದ್ದು ಮಾತ್ರವಲ್ಲದೆ ಹಣಕ್ಕಾಗಿ ಪದೇ ಪದೇ ನನಗೆ ಬ್ಲಾಕ್‌ಮೇಲ್‌ ಮಾಡುತ್ತಿದ್ದಳು.

ನಾನು ನನ್ನ ಫ್ಲಾಟ್‌ ಅನ್ನು 7 ಲಕ್ಷ ರೂಪಾಯಿಗಳಿಗೆ ಮಾರಿ ಆ ಹಣವನ್ನು ಕೂಡಾ ಆಕೆಗೆ ನೀಡಿದ್ದೇನೆ. ಹೀಗಿದ್ದರೂ ಆಕೆಯ ಹಣದ ದಾಹ ಕಡಿಮೆಯಾಗಿರಲಿಲ್ಲ. ಎಂದು ತಾನು ಪ್ರೀತಿಸಿದಾಕೆಯಿಂದ ಮೋಸ ಹೋಗಿರುವುದಾಗಿ ಬರೆದುಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!